ಕೋಟೆ ಬೆಟ್ಟಕ್ಕೆ ಬಂದಿದ್ದ ಪ್ರವಾಸಿಗರ ಮೇಲೆ ಹಲ್ಲೆ! ಚಿನ್ನದ ಸರ ಎಗರಿಸಿ ಪರಾರಿ

ಮಡಿಕೇರಿ: ಕೋಟೆಬೆಟ್ಟ  ಪ್ರವಾಸಕ್ಕೆಂದು ಆಗಮಿಸಿದ ಪ್ರವಾಸಿಗರ ಮೇಲೆ ಬೈಕಿನಲ್ಲಿ ಬಂದ ಇಬ್ಬರು ಹಲ್ಲೆ ಮಾಡಿ ದೌರ್ಜನ್ಯ ಎಸಗಿರುವ ಘಟನೆ ಕೊಡಗು  ಜಿಲ್ಲೆಯಲ್ಲಿ ನಡೆದಿದೆ. ಮಕ್ಕಳು, ಮಹಿಳೆಯರು ಸೇರಿದಂತೆ ಪುತ್ತೂರಿನಿಂದ ಕುಟುಂಬವೊಂದು ಕೋಟೆಬೆಟ್ಟ ಪ್ರವಾಸಿ ತಾಣಕ್ಕೆ ಆಗಮಿಸಿದ್ದರು.

ಈ ವೇಳೆ ಬೈಕಿನಲ್ಲಿ ಬಂದ ಇಬ್ಬರು ಪುಂಡರು ಹಲ್ಲೆ ನಡೆಸಿದ್ದಾರೆ. ಅದಾದ ಬಳಿಕ ಚಿನ್ನದ ಸರ ಎಗರಿಸಿ ಬೈಕನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳಿಬ್ಬರು ಮಾದಾಪುರ ಸಮೀಪದ ನಿವಾಸಿಗಳೆಂಬ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳು ಪ್ರವಾಸಿಗರ ಮೇಲೆ ಹೆಲ್ಮೆಟ್​ನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ದೌರ್ಜನ್ಯಕ್ಕೆ ಒಳಗಾದವರು ಮಾದಾಪುರ ಉಪ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ಸೋಮವಾರಪೇಟೆ ಪೊಲೀಸ್ ಠಾಣಾ ಮೆಟ್ಟಿಲೇರಿದೆ.

Check Also

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಬೆಳ್ಳಾರೆ ಕೇಂದ್ರ ಮಸ್ಜಿದ್ ನಲ್ಲಿ ಭಯೋತ್ಪಾದನಾ ಚಟುವಟಿಕೆ- ಹಲವಾರು ಅನುಮಾನಗಳಿಗೆ ಕಾರಣವಾದ ಈ ಒಂದು ಪೊಸ್ಟ್..

ಬೆಳ್ಳಾರೆಯ ಝಕರಿಯಾ ಜುಮಾ ಮಸೀದಿ ಮತ್ತು SKSSF ವಿಖಾಯ ಕಾರ್ಯಕರ್ತರಾದ ಅಝರ್ ಮತ್ತು ಜಮಾಲ್ ರವರ ಮೇಲೆ ಸಲಫಿ ನಾಯಕ …

Leave a Reply

Your email address will not be published. Required fields are marked *

You cannot copy content of this page.