ದೇಶದ ಕಾರ್ಯನಿರತ ಪತ್ರಕರ್ತರಿಗೆ ಬೆದರಿಕೆಯೊಡ್ಡಿದರೆ ಅವಮಾನ ಮಾಡಿದರೆ ಅಥವಾ ಥಳಿಸುವವರಿಗೆ ರೂ.50 ಸಾವಿರ ದಂಡ ಹಾಗೂ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ದೇಶದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಈ ನಿಟ್ಟಿನಲ್ಲಿ ಗುರುವಾರ ಪ್ರಕರಣವೊಂದರ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ಪಷ್ಟನೆ ನೀಡಿದೆ.ಸುಪ್ರೀಂ ತೀರ್ಪಿನ ಬಗ್ಗೆ ಹಲವಾರು ಪತ್ರಕರ್ತರ ಸಂಘಗಳು ಸಂತಸ ವ್ಯಕ್ತಪಡಿಸಿವೆ. ಯಾವುದೇ ರೀತಿಯ ಭಯವಿಲ್ಲದೆ ಸಾರ್ವಜನಿಕರಿಗೆ ವಾಸ್ತವಿಕ ಮಾಹಿತಿ ನೀಡಲು ಅವಕಾಶವಿರುವುದರಿಂದ ಹಲವಾರು ಪತ್ರಕರ್ತರ ಸಂಘಗಳ ಮುಖಂಡರು ಹಾಗೂ ಹಿರಿಯ ಪತ್ರಕರ್ತರು ತೀರ್ಪಿಗೆ ಆಹ್ವಾನ ನೀಡಿದ್ದಾರೆ. ರಾಜಕೀಯ ಮುಖಂಡರಿಂದಲೂ ಒಂದಷ್ಟು ರಕ್ಷಣೆ ಸಿಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.