ಮಂಗಳೂರು: ಟೆಂಪೋ ಢಿಕ್ಕಿ-ರಾಮಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಮೃತ್ಯು

ಮಂಗಳೂರು: ಟೆಂಪೋ ಢಿಕ್ಕಿ ಹೊಡೆದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿ ಮೃತಪಟ್ಟ ಘಟನೆ ಮಂಗಳೂರಿನ ಕುಚಿಕಾಡು ಎಂಬಲ್ಲಿ ನಡೆದಿದೆ.

ಮೃತರನ್ನು ರಾಮಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಬಿಕರ್ನಕಟ್ಟೆ ನಿವಾಸಿ ರಾಧಾಕೃಷ್ಣ ರಾವ್‌ (65) ಅವರು ಎಂದು ಗುರುತಿಸಲಾಗಿದೆ.

ಅವರು ಸಂಜೆ 5.45ರ ಸುಮಾರಿಗೆ ಕಲ್ಪನೆ ಕಡೆಯಿಂದ ಬಿಕರ್ನಕಟ್ಟೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕುಚಿಕಾಡು ಎನ್ನುವಲ್ಲಿ ಟೆಂಪೋ ಢಿಕ್ಕಿ ಹೊಡೆದಿತ್ತು.
ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫ‌ಲಕಾರಿಯಾಗದೆ ಅವರು ರಾತ್ರಿ 7.45ರ ಸುಮಾರಿಗೆ ಮೃತಪಟ್ಟರು.
ಮೆಸ್ಕಾಂ ಜೆಪ್ಪು ಶಾಖೆಯ ಕಿರಿಯ ಅಭಿಯಂತರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು ಬಿಕರ್ನಕಟ್ಟೆಯ ಶ್ರೀ ಹರಿಹರ ಪಾಂಡುರಂಗ ವಿಠಲ ಭಜನ ಮಂದಿರದ ಅಧ್ಯಕ್ಷರಾಗಿದ್ದರು. ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಅವರು ಪತ್ನಿ ನಿವೃತ್ತ ಶಿಕ್ಷಕಿ ಗೌರಿ ರಾಧಾಕೃಷ್ಣ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Check Also

ಮಂಗಳೂರು/ಉಡುಪಿ: ಅವಳಿ ಜಿಲ್ಲೆಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ -ಮರವಂತೆಯಲ್ಲಿ ತ್ರೀವಗೊಂಡ ಕಡಲ್ಕೊರೆತ

ಮಂಗಳೂರು/ಉಡುಪಿ:ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶನಿವಾರ ಧಾರಾಕಾರ ಮಳೆಯಾಗಿದೆ.ಕೊಡಾಜೆ-ಅನಂತಾಡಿ ರಸ್ತೆಯ ಗೋಳಿಕಟ್ಟೆ ಎಂಬಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು …

Leave a Reply

Your email address will not be published. Required fields are marked *

You cannot copy content of this page.