March 21, 2026
WhatsApp Image 2024-05-18 at 2.55.30 PM

ಮಂಗಳೂರು ತಾ.ಪಂ: ನೀರುಮಾರ್ಗ ಗ್ರಾಮ ಪಂಚಾಯತ್ ವತಿಯಿಂದ ಇಂದು ಗ್ರಾಮ‌ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಹಾಗೂ ಸಾರ್ವಜನಿಕ‌ ಸ್ಥಳಗಳಲ್ಲಿನ ತ್ಯಾಜ್ಯ ಸಂಗ್ರಹಿಸಿ‌ ಸ್ವಚ್ಚತೆ ಕಾಪಾಡುವ ದೃಷ್ಟಿಯಿಂದ ಬೃಹತ್ ಸ್ವಚ್ಚತಾ ಕಾರ್ಯ ಕ್ರಮ ಆಯೋಜಿಸಲಾಗಿತ್ತು.

ಸ್ವಚ್ಚತಾ ಕಾರ್ಯದ ವೇಳೆ ರಸ್ತೆ ಬದಿ ಎಸೆದ ಕಸದ ಮೂಟೆಯಲ್ಲಿ ಕೆಲವೊಂದು ಬಿಲ್ ಗಳು ಹಾಗೂ ಆನ್ ಲೈನ್ ನಿಂದ ಖರೀದಿಸಿದ ವಸ್ತುಗಳ ಕವರ್ ಗಳು ಸಿಕ್ಕಿದ್ದು, ಅದರಲ್ಲಿನ ವಿಳಾಸವನ್ನು ಪತ್ತೆ ಹಚ್ಚಿ ಸಂಬಂಧಪಟ್ಟವರಿಂದ ಸುಮಾರು 5000 ರೂ ದಂಡ ವಸೂಲಿ ಮಾಡಲಾಯಿತು.

ಈ ಸ್ವಚ್ಚತಾ ಕಾರ್ಯದಲ್ಲಿ ಗ್ರಾ.ಪಂ‌ ಅಧ್ಯಕ್ಷರು, ಸದಸ್ಯರುಗಳು, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಯವರು, ಸಹಾಯಕ ನಿರ್ದೇಶಕರು (ಗ್ರಾ.ಉ ನರೇಗಾ), ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ ಮತ್ತು ಗ್ರಾ.ಪಂ ಸಿಬ್ಬಂದಿ ಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

About The Author

Leave a Reply

Your email address will not be published. Required fields are marked *

You cannot copy content of this page.