March 21, 2026
WhatsApp Image 2024-05-13 at 3.20.24 PM
ಉಡುಪಿಯಿಂದ ಸಂತೆಕಟ್ಟೆಗೆ ಸಾಗುವ ಹೆದ್ದಾರಿಯ ಅಂಬಾಗಿಲು ಜಂಕ್ಷನ್ ನಿಂದ ತುಸು ದೂರದಲ್ಲಿರುವ  ಬಿರಿಯಾನಿ ಸ್ಪಾಟ್  ಹೋಟೇಲ್ ಎದುರುಗಡೆ ರಸ್ತೆಯನ್ನು ದಾಟುತ್ತಿದ್ದ ಅಪರಿಚಿತ ವ್ಯಕ್ತಿಯೋರ್ವರಿಗೆ ಕುಂದಾಪುರ ಕ್ಕೆ ಹೋಗುತ್ತಿದ್ದ ಸರಕಾರಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಗಾಯಗೊಂಡು ವ್ಯಕ್ತಿ ಮೃತಪಟ್ಟ ಘಟನೆ ಸಂಭವಿಸಿದೆ.
ರಾತ್ರಿ 8:45 ಗಂಟೆಗೆ ಅಪಘಾತ ಸಂಭವಿಸಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ವ್ಯಕ್ತಿಯು ಮ್ರತಪಟ್ಟಿರುವುದಾಗಿ ಧ್ರಢೀಕರಿಸಿದರು. ಈ ಬಗ್ಗೆ ಉಡುಪಿ ಸಂಚಾರಿ   ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ವ್ಯಕ್ತಿಯ ಮ್ರತದೇಹವು  ಕೆ ಎಂ ಸಿ ಮಣಿಪಾಲ ಆಸ್ಪತ್ರೆಯ ಶವಾಗಾರದಲ್ಲಿದೆ. ಈ ಮ್ರತ ವ್ಯಕ್ತಿಯ ಸಂಬಂಧಿಕರು ಅಥವಾ ಗುರುತು ಪರಿಚಯವಿರುವವರು ಈಶ್ವರ್ ಮಲ್ಪೆ 9663434415 ಅಥವಾ ಉಡುಪಿ ಸಂಚಾರಿ ಪೋಲಿಸ್ ಠಾಣೆ   0820 2521338 ಯನ್ನು ಸಂಪರ್ಕಿಸಬೇಕಾಗಿ ವಿನಂತಿಸಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.