March 23, 2026
WhatsApp Image 2024-05-13 at 9.45.19 AM

ಸುಬ್ರಹ್ಮಣ್ಯ: ಇತಿಹಾಸ ಪ್ರಸಿದ್ದ ಶ್ರೀ ಕ್ಷೇತ್ರ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಕಲ್ಯಾಣ ಮಂಟಪದ ಮೇಲ್ಛಾವಣಿಯಲ್ಲಿ ಗಾಂಜಾ ಗಿಡ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಆದಿ ಸುಬ್ರಹ್ಮಣ್ಯ ಕ್ಷೇತ್ರದ ಬಳಿಯಿರುವ ಕಲ್ಯಾಣ ಮಂಟಪದ ಮೇಲ್ಛಾವಣಿಯಲ್ಲಿ ನೀರಿನ ಟ್ಯಾಂಕ್‌ ಬಳಿ ಗಾಂಜಾ ಗಿಡ ಇದ್ದ ಬಗ್ಗೆ ಅಲ್ಲಿನ ಸ್ಥಳೀಯರ ಗಮನಕ್ಕೆ ಬಂದಿರುತ್ತದೆ. ಮಾಹಿತಿ ತಿಳಿದ ಸ್ಥಳೀಯರು ಅದನ್ನು ಪರಿಶೀಲಿಸಿ ಫೋಟೋ ತೆಗೆದು ಸ್ಥಳೀಯ ಪೊಲೀಸ್‌ ಠಾಣೆಗೆ ಮತ್ತು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ನೀಡಿದ ಬಳಿಕ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ಬಂದಿದೆ. ತಕ್ಷಣವೇ ಕಾರ್ಯನಿರ್ವಹಣಾಧಿಕಾರಿಗಳು ಆದಿ ಸುಬ್ರಹ್ಮಣ್ಯ ದೇವಸ್ಥಾನದ ಕಲ್ಯಾಣ ಮಂಟಪದದ ಉಸ್ತುವಾರಿ ರಾಮಕೃಷ್ಣ ಭಟ್‌ ಎಂಬವರಿಗೆ ಮಾಹಿತಿ ತಿಳಿಸಿದ್ದಾರೆ. ಕಲ್ಯಾಣ ಮಂಟಪದ ಉಸ್ತುವಾರಿ ರಾಮಕೃಷ್ಣ ಭಟ್‌ ಆ ಗಿಡವನ್ನು ಅಲ್ಲಿಂದ ತೆಗೆಸಿದ್ದಾರೆ ರಾಮಕೃಷ್ಣ ಭಟ್ ಮತ್ತು ಆದಿ ಸುಬ್ರಹ್ಮಣ್ಯ ದೇವಸ್ಥಾನದ ಭೋಜನ ಶಾಲೆಯ ಉಸ್ತುವಾರಿ ಗಣೇಶ್ ಭಟ್ ರವರ ಮೇಲೆ ಅನುಮಾನ ಮೂಡುತ್ತಿದೆ ಎಂದು ಸ್ಥಳೀಯರ ಆರೋಪವಾಗಿದೆ. ಮಾಹಿತಿ ಸಿಕ್ಕಿದ ಮೇಲೆ ಆಡಳತ ವರ್ಗ ಯಾಕೆ ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದೆ ಎಂದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನಿನ್ನೆ ದೂರು ನೀಡಿದ ಬಳಿಕ ಇಂದು ಸ್ಥಳೀಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಲು ಬಂದಾಗ ಆ ಗಿಡ ಅಲ್ಲಿಂದ ಮಾಯವಾಗಿರುತ್ತದೆ. ಇದರಿಂದ ಸ್ಥಳಿಯರ ಅನುಮಾನ ಇನ್ನೂ ಹೆಚ್ಚಾಗಿದೆ. ಸುಮಾರು 4 ರಿಂದ 5ಫೀಟ್‌ ಎತ್ತರ ಬೆಳೆದಿರುವ ಗಾಂಜಾ ಗಿಡ ನೆಟ್ಟದ್ದು ಯಾರು? ತೆಗೆದದ್ದು ಯಾರು? ಎಂಬ ಪ್ರಶ್ನೆಗೆ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಕಲ್ಯಾಣ ಮಂಟಪದ ಉಸ್ತುವಾರಿ ರಾಮಕೃಷ್ಣ ಭಟ್ ಮತ್ತು ಆದಿ ಸುಬ್ರಹ್ಮಣ್ಯ ದೇವಸ್ಥಾನದ ಭೋಜನ ಶಾಲೆಯ ಉಸ್ತುವಾರಿ ಗಣೇಶ್ ಭಟ್ ರವರು ಉತ್ತರ ನೀಡಬೇಕಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ. ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಪ್ರಕರಣದ ಸತ್ಯಾ ಸತ್ಯತೆಯನ್ನು ಹೊರಗೆಳೆಯಬೇಕೆಂಬುವುದು ಸ್ಥಳೀಯರ ಕೋರಿಕೆಯಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.