March 21, 2026
WhatsApp Image 2024-05-11 at 8.34.07 AM

ಉಡುಪಿ: ವಿಡಿಯೋ ಕಾಲ್‌ ಅನ್ನು ರೆಕಾರ್ಡ್‌ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ಹಂತಹಂತವಾಗಿ ಲಕ್ಷಾಂತರ ರೂ.ಗಳನ್ನು ವಸೂಲು ಮಾಡಿಕೊಂಡ ಘಟನೆ ಸಂಭವಿಸಿದೆ.

ಸಂತೆಕಟ್ಟೆಯ ಅಸ್ಟರ್‌ ಅವರಿಗೆ ಡೇಟಿಂಗ್‌ ಆ್ಯಪ್‌ ಮೂಲಕ ಸಾಚಿ ಜೈನ್‌ ಎಂಬ ಯುವತಿಯ ಪರಿಚಯವಾಗಿತ್ತು. ಆ ಬಳಿಕ ಆಕೆಯು ವಾಟ್ಸಾಪ್‌ನಲ್ಲಿ ಅಸ್ಟರ್‌ ಅವರೊಂದಿಗೆ ಚಾಟಿಂಗ್‌ ಮತ್ತು ವಿಡಿಯೋ ಕಾಲ್‌ ನಡೆಸುತ್ತಿದ್ದರು. ಈ ವಿಡಿಯೋ ಕಾಲ್‌ ಅನ್ನು ರೆಕಾರ್ಡ್‌ ಮಾಡಿ ಕೆಲವು ದಿನಗಳ ಬಳಿಕ ಅಸ್ಟರ್‌ ಅವರಿಗೆ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಅಸ್ಟರ್‌ ಅವರು ಆಕೆ ತಿಳಿಸಿದ ಬ್ಯಾಂಕ್‌ ಖಾತೆ ಹಾಗೂ ಯುಪಿಐ ಐಡಿ ಗಳಿಗೆ ಹಂತ ಹಂತವಾಗಿ 11,30,106ರೂ.ವರ್ಗಾಯಿಸಿದ್ದಾರೆ. ಸೆನ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.