March 25, 2026
WhatsApp Image 2024-05-06 at 2.23.59 PM

ಕಾಪು: 11 ವರ್ಷದ ಬಾಲಕಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಉಡುಪಿ ಕಾಪುವಿನ ಮಣಿಪುರ ಗ್ರಾಮದಲ್ಲಿ ನಡೆದಿದೆ. ಸಂದೇಶ್‌ ಅವರ 11 ವರ್ಷದ ಪುತ್ರಿ ಧನ್ವಿ ಎಂಬುವವಳು ಮೃತಪಟ್ಟಿದ್ದಾರೆ. ಧನ್ವಿ 4ನೇ ತರಗತಿ ಮುಗಿಸಿ ಪ್ರಸ್ತುತ ಶಾಲೆಗೆ ರಜೆಯಾಗಿರುವುದರಿಂದ ಮನೆಯಲ್ಲಿಯೇ ಇದ್ದಳು. ಮೇ.8ರಂದು ಧನ್ವಿಯು ರಾತ್ರಿ ಎಲ್ಲರೊಂದಿಗೆ ಊಟ ಮುಗಿಸಿ ಮಲಗಿಕೊಂಡಿದ್ದು, ಮೇ. 9ರಂದು ಬೆಳಿಗಿನ ಜಾವ 3:00 ಗಂಟೆಯ ಸುಮಾರಿಗೆ ಧನ್ವಿಯು ನಿದ್ರೆಯಿಂದ ಎದ್ದು ವಾಂತಿ ಮಾಡಲು ಆರಂಭಿಸಿದ್ದಾಳೆ. ಬಳಿಕ ಧನ್ವಿ ಗೆ ನೀರನ್ನು ಕೊಟ್ಟು ಮಲಗಿಸಿದ್ದರೂ ಕೂಡಾ ಆಕೆ ಗಂಟೆಗೊಮ್ಮೆ ಎದ್ದು ವಾಂತಿ ಮಾಡುತ್ತಿದ್ದಳು. ನಂತರ ಮೆ. 9ರ ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ಕ್ಲಿನಿಕ್ಪ್ ಒಂದಕ್ಕೆ ಧ್ವನಿಯನ್ನು ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ಆಕೆಗೆ ಇಂಜೆಕ್ಷನ್‌ ಹಾಗೂ ಮದ್ದನ್ನು ನೀಡಿ ಗಂಟೆಗೊಮ್ಮ ಓಆರ್‌ಎಸ್‌ ಪೌಡರ್‌ ಕೊಡುವಂತೆ ಹಾಗೂ ಗಂಜಿ ಊಟ ನೀಡುವಂತೆ ತಿಳಿಸಿದ್ದಾರೆ. ನಂತರ ಮನೆಗೆ ಬಂದ ಧನ್ವಿಯು ಆರೋಗ್ಯವಾಗಿದ್ದು, ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ಕೈಕಾಲು ಸೆಲೆದುಕೊಂಡು ಪಿಟ್ಸ್‌ ಬಂದ ರೀತಿಯಲ್ಲಿ ವರ್ತಿಸುತ್ತಿದ್ದಳು. ಕೂಡಲೇ ಧ್ವನಿಯ ತಂದೆ ಸಂದೇಶ್‌ ಆಕೆಯನ್ನು ತನ್ನ ರಿಕ್ಷಾದಲ್ಲಿ ಉಡುಪಿಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆಕೆಯನ್ನು ಪರೀಕ್ಷಿಸಿದ ವೈದ್ಯರು ಧನ್ವಿಯು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಧ್ವನಿಯ ತಂದೆ ಕಾಪು ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಠಾಣೆಯಲ್ಲಿ ಯು.ಡಿ.ಆರ್ ಕ್ರಮಾಂಕ 15/2024 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.