March 22, 2026
WhatsApp Image 2024-02-15 at 2.21.02 PM

ಉಡುಪಿ: ಕೆನರಾ ಬ್ಯಾಂಕ್‌ನ ಖಾತೆದಾರರೊಬ್ಬರ ಖಾತೆಯಿಂದ 1.25 ಲಕ್ಷ ರೂ. ಹಣ ವರ್ಗಾವಣೆಯಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲತಾ (64) ಎಂಬುವವರಿಗೆ 2 ವಾರದಿಂದ ಮೊಬೈಲ್ ಫೋನ್‌ಗೆ ಅಪರಿಚಿತ ವ್ಯಕ್ತಿಗಳ ಮೆಸೇಜ್, ಕಾಲ್ ಬರುತ್ತಿದ್ದು, ಫೆಬ್ರವರಿ 13ರಂದು ಸಂಜೆ ಕೆನರಾ ಬ್ಯಾಂಕ್‌ಗೆ ಹೋಗಿ ಅಲ್ಲಿದ್ದ ಕೆನರಾ ಬ್ಯಾಂಕ್ ಆಫೀಸ‌ರ್ ಸಹಾಯದಿಂದ ಎಟಿಎಂ ಕಾರ್ಡ್ ಪಿನ್ ಕೋಡ್ ಬದಲಾಯಿಸಿಕೊಂಡಿದ್ದರು. ಆದರೂ, ಲತಾ ಮನೆಯಲ್ಲಿದ್ದಾಗ ಅವರ ಗಮನಕ್ಕೆ ಬಾರದೇ ಅವರ ಖಾತೆಯಿಂದ 1.25 ಲಕ್ಷ ರೂ. ಹಣ ವರ್ಗಾವಣೆಯಾಗಿದೆ. ಈ ಬಗ್ಗೆ ಲತಾ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.