May 7, 2026
WhatsApp Image 2024-01-09 at 3.20.09 PM

 ರೀಲ್ಸ್‌ ಮಾಡಲು ಬಿಡದ್ದಕ್ಕೆ ಪತ್ನಿಯೊಬ್ಬಳು ತನ್ನ ಸಂಬಂಧಿಕರೊಂದಿಗೆ ಸೇರಿಕೊಂಡು ಪತ್ನಿಯನ್ನೇ ಕೊಲಗೈದಿರುವ ಘಟನೆ ಬಿಹಾರದ ಬೇಗುಸರಾಯ್ ನಲ್ಲಿ ನಡೆದಿದೆ.

ಭಾನುವಾರ (ಜನವರಿ 7) ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕೊಲೆಯಾದ ಮಹೇಶ್ವರ್ ಕೂಲಿ ಕೆಲಸ ಮಾಡಿಕೊಂಡಿದ್ದ. ಫಫೌತ್ ಗ್ರಾಮದವರಾದ ರಾಣಿ ಕುಮಾರಿ ಸುಮಾರು 6 ರಿಂದ 7 ವರ್ಷಗಳ ಹಿಂದೆ ಮಹೇಶ್ವರ್ ಅವರನ್ನು ವಿವಾಹವಾಗಿದ್ದರು. ಕೋಲ್ಕತ್ತಾದಲ್ಲಿ ಕೂಲಿ ಕೆಲಸ ಮಾಡಿಕೊಂಡು ಇರುತ್ತಿದ್ದ ಮಹೇಶ್ವರ್‌ ಇತ್ತೀಚೆಗೆ ತನ್ನ ಅತ್ತೆಯ ಮನೆಯಿರುವ ಫಪೌತ್‌ ಗೆ ಬಂದಿದ್ದರು. ಈ ವೇಳೆ ಪತ್ನಿ ರಾಣಿ ಕುಮಾರಿ ಹಾಗೂ ಪತಿ ಮಹೇಶ್ವರ್‌ ನಡುವೆ ಜಗಳ ನಡೆದಿದೆ. ಪತ್ನಿ ರೀಲ್ಸ್‌ ಮಾಡುತ್ತಿದ್ದದ್ದು ಪತಿ ಮಹೇಶ್ವರ್‌ ಇಷ್ಟವಿರಲಿಲ್ಲ. ಈ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ ಕಲಹ ನಡೆಯುತ್ತಿತ್ತು. ರೀಲ್ಸ್‌ ಮಾಡಬೇಡ ಎಂದಿದ್ದಕ್ಕೆ ಶುರುವಾದ ಜಗಳದಿಂದ ಆಕ್ರೋಶಗೊಂಡ ಪತ್ನಿ ತನ್ನ‌ ಸಹೋದರ ಸಂಬಂಧಿಗಳೊಂದಿಗೆ ಸೇರಿಕೊಂಡು ಪತಿಯನ್ನು ಕೊಲೆಗೈದಿದ್ದಾರೆ.

ಮಹೇಶ್ವರ್‌ ಅವರ ತಮ್ಮ ಮೊಬೈಲ್‌ ಕರೆ ಮಾಡಿದ ಬಳಿಕ ಯಾರೋ ಬೇರೊಬ್ಬರು ಕರೆಯನ್ನು ಸ್ವೀಕರಿಸಿದ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ಮಹೇಶ್ವರ್‌ ಅವರ ಸಹೋದರ ಕೂಡಲೇ ಫಿಫೌತ್‌ಗೆ ತೆರಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಪತ್ನಿ ಹಾಗೂ ಅವರ ಸಂಬಂಧಿಗಳನ್ನು ಪೊಲೀಸರು ಬಂಧಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.