‘ಡ್ರೋನ್ ಪ್ರತಾಪ್’ ಆತ್ಮಹತ್ಯೆಗೆ ಯತ್ನ ವದಂತಿಗೆ ತೆರೆ : ಸ್ಪಷ್ಟನೆ ನೀಡಿದ ವೈದ್ಯರು ಹೇಳಿದ್ದೇನು?

ಬೆಂಗಳೂರು : ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್’ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ಹಿನ್ನೆಲೆ ಸಂಜೀವಿನಿ ಆಸ್ಪತ್ರೆಯ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.

‘ಪ್ರತಾಪ್ ಅವರಿಗೆ ವಾಂತಿ ಮತ್ತು ಬೇಧಿ ಆಗಿತ್ತು.

ಅವರಿಗೆ ಫುಡ್ ಪಾಯ್ಸನ್ ಆಗಿತ್ತು, ಸರಿಯಾಗಿ ಊಟ ಮಾಡದೇ ಇರುವುದರಿಂದ ಈ ರೀತಿ ಆಗಿದೆ ಎಂದಿದ್ದಾರೆ. ಅವರಿಗೆ ಎಲ್ಲಾ ರೀತಿಯ ಪರೀಕ್ಷೆ ಮಾಡಲಾಗಿದೆ, ಅವರಿಗೆ ಯಾವುದೇ ತೊಂದರೆ ಇಲ್ಲ ಎಂದು ಸಂಜೀವಿನಿ ಆಸ್ಪತ್ರೆಯ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.

ಹಲವು ಮಂದಿ ಪ್ರತಾಪ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಅಂತ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಕೆಲವು ಮಂದಿ ಪ್ರತಾಪ್ ಅವರು ವಿಟಮಿನ್ ಮಾತ್ರೆಗಳನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೂಡ ಹೇಳಿದ್ದರು. ಇದೀಗ ಎಲ್ಲಾ ವದಂತಿಗೆ ವೈದ್ಯರು ತೆರೆ ಎಳೆದಿದ್ದಾರೆ.

Check Also

ಮಳೆ ಅಬ್ಬರ; ಜು.9 ರಂದು ಉಡುಪಿ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ

ಉಡುಪಿ : ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದ್ದು ತಗ್ಗು ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳವಾರ (ಜುಲೈ 9 …

Leave a Reply

Your email address will not be published. Required fields are marked *

You cannot copy content of this page.