March 16, 2026
WhatsApp Image 2023-12-23 at 12.09.44 PM

ಉಡುಪಿ: ಪರವಾನಿಗೆ ಇಲ್ಲದೆ ಮೆಹಂದಿ ಕಾರ್ಯಕ್ರಮ ನಡೆಸಿದ ಮನೆಗೆ ದಾಳಿ ನಡೆಸಿದ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ.

ಅಂಬಲಪಾಡಿಯ ಪ್ರಜ್ವಲ್ ನಗರದ ರೈಸ್ ಮಿಲ್ ಪರಿಸರದಲ್ಲಿ ಅತೀ ಕರ್ಕಶವಾದ ಶಬ್ದ ಕೇಳಿಸಿದ ಮೇರೆಗೆ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಯಾವುದೇ ಪೂರ್ವಾನುಮತಿ ಪಡೆಯದೇ ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಕಂಡು ಬಂತು. ಧ್ವನಿವರ್ಧಕವನ್ನು ಅತೀ ಕರ್ಕಶವಾಗಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ತಡರಾತ್ರಿಯವರೆಗೂ ಬಳಸಿದ್ದರಿಂದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.