March 16, 2026
WhatsApp Image 2023-12-10 at 11.50.09 AM

ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಕೈಗೊಂಡಿದ್ದ ಪಾದಯಾತ್ರೆ ವೇಳೆ ತಮಿಳುನಾಡಿನ 12 ವರ್ಷದ ಬಾಲಕಿ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ತಮಿಳುನಾಡು ಮೂಲದ ಪದ್ಮಶ್ರೀ (12) ಶಬರಿಮಲೆ ಬೆಟ್ಟದ ಮೇಲಿನ ದೇಗುಲಕ್ಕೆ ಟ್ರೆಕ್ಕಿಂಗ್ ಮಾಡುತ್ತಿರುವಾಗ ಅಪ್ಪಾಚಿಮೇಡು ಎಂಬಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ತಕ್ಷಣ ಅವರನ್ನು ಪ್ಪಾಚಿಮೇಡುವಿನ ಹೃದ್ರೋಗ ಚಿಕಿತ್ಸಾ ಕೇಂದ್ರದಲ್ಲಿ ಸೇರಿಸಿದ್ದು ಅವರು ಚಿಕಿತ್ಸೆ ಫಲಿಸದೇ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಮೃತದೇಹವನ್ನು ಪಂಬಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಬಾಲಕಿಗೆ ಉಸಿರಾಟ ಸಮಸ್ಯೆ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳಿತ್ತು ಎಂಬುದು ತಿಳಿದುಬಂದಿದೆ. ಬಾಲಕಿ ಮೂರು ವರ್ಷದಿಂದ ಹೃದ್ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು, ಡಯಾಲಿಸಿಸ್ ಮಾಡಿಸಿಕೊಳ್ಳುತ್ತಲೇ ಶಬರಿಮಲೆ ಏರಲು ನಿರ್ಧರಿಸಿದ್ದರು.

About The Author

Leave a Reply

Your email address will not be published. Required fields are marked *

You cannot copy content of this page.