May 24, 2025
bantwala barati home

ಬಂಟ್ವಾಳ: ಆರ್ಥಿಕವಾಗಿ ಬಳಲಿರುವ ನಮಗೆ ಸಹಾಯ ಮಾಡುವಂತೆ ಬಂಟ್ವಾಳ ತಾಲೂಕಿನ ಬಡಕಜೆಕಾರುವಿನ ಕುಲಾಲ ಕುಟುಂಬವೊಂದು ದಾನಿಗಳ ಮೊರೆ ಹೋಗಿದೆ.
ಬಡಗಕಜೆಕಾರು ಪಾದೆ ದರ್ಖಾಸು ಮಾಡಪಲ್ಕೆ ನಿವಾಸಿ ಬಾಲಕೃಷ್ಣ ಕುಲಾಲ್ ಮತ್ತು ಭಾರತಿ ದಂಪತಿ ಆರ್ಥಿಕ ಸಹಾಯಕ್ಕಾಗಿ ಮೊರೆ ಹೋದ ಕುಟುಂಬ. ಬಾಡಿಗೆ ಮನೆಯಲ್ಲಿದ್ದ ಇವರು ಕಳೆದೆರಡು ವರ್ಷದ ಹಿಂದೆ ಸರಕಾರದ ೯೪ಸಿ ಯೋಜನೆಯಡಿ ೫ ಸೆಂಟ್ಸ್ ನಿವೇಶನ ಪಡೆದುಕೊಂಡಿದ್ದು, ಚಿಕ್ಕದಾದ ಆರ್‌ಸಿಸಿ ಮನೆ ನಿರ್ಮಿಸಿಕೊಂಡಿದ್ದಾರೆ. ಬಾಲಕೃಷ್ಣ ಕುಲಾಲ್ ಗಾರೆ ಕೆಲಸಕ್ಕೆ ಹೋಗುತ್ತಿದ್ದು, ಪ್ರತೀದಿನ ಕೆಲಸ ಸಿಗುವುದಿಲ್ಲ ಎನ್ನುವ ಅವರು ಮಳೆಗಾಲದಲ್ಲಂತೂ ತಿಂಗಳುಗಳ ಕಾಲ ಮನೆಯಲ್ಲೇ ಇರಬೇಕಾದ ಸ್ಥಿತಿ ಬರುತ್ತದೆ ಎನ್ನುತ್ತಾರೆ. ಭಾರತಿ ಅವರು ಗೃಹಿಣಿಯಾಗಿದ್ದು, ವಧು-ವರ ಸಂದಾನ ಮಾಡುವ ಪುಣ್ಯದ ಸೇವಾಕಾರ್ಯ ಮಾಡುತ್ತಿದ್ದಾರೆ. ಇವರಿಗಿರುವ ಇಬ್ಬರು ಪುತ್ರಿಯರಲ್ಲಿ ದೊಡ್ಡವಳು ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಹಾಗೂ ಕಿರಿಯವಳು ೮ನೇ ತರಗತಿಯಲ್ಲಿ ವಿದ್ಯಾರ್ಜನೆ ಪಡೆಯುತ್ತಿದ್ದಾರೆ. ಮನೆ ನಿರ್ಮಾಣಕ್ಕೆ ಬ್ಯಾಂಕಿನಿಂದ ರೂ. ೩ ಲಕ್ಷ ಸಾಲ ಪಡೆದುಕೊಂಡಿದೆ. ಆದರೆ ಮನೆಯ ಕಾಮಗಾರಿ ಪೂರ್ಣಗೊಳ್ಳಬೇಕಾದರೆ ಇನ್ನೂ ಕನಿಷ್ಠ ರೂ. ೩.೦೦ ಲಕ್ಷದಷ್ಟು ಬೇಕಾಗಿದೆ. ಸ್ನಾನದ ಗೃಹ, ಶೌಚಾಲಯ ಕಾಮಗಾರಿ ಪೂರ್ಣವಾಗಿಲ್ಲ. ಸಾರನೆ ಕೆಲಸವೂ ಬಾಗಿ ಇದೆ. ಕುಡಿಯಲು ಪಂಚಾಯತ್ ನಳ್ಳಿ ನೀರನ್ನು ಆಶ್ರಯಿಸುತ್ತಿದ್ದು, ಇದೀಗ ಬೇಸಿಗೆ ಕಾಲದಲ್ಲಿ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಕುಡಿಯುವ ನೀರಿಗಾಗಿ ಬಾವಿ ನಿರ್ಮಾಣ ಆಗಬೇಕಿದೆ. ಒಬ್ಬರ ಆದಾಯದಿಂದ ಕುಟುಂಬ ನಿರ್ವಹಣೆ, ಮಕ್ಕಳ ಶಾಲಾ ಖರ್ಚು, ಸಾಲ ತೀರಿಸುವುದೇ ಕಷ್ಟವಾಗಿರುವಾಗ ಮನೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಮನೆಯ ತಾರಸಿ ಮೇಲೆ ತಡೆಗೋಡೆ ನಿರ್ಮಾಣ ಆಗದೆ ಮಳೆನೀರು ಗೋಡೆ, ಕಿಟಕಿಯ ಮೂಲಕ ಮನೆಯೊಳಗೆ ಬರುತ್ತಿದೆ. ಈ ಎಲ್ಲಾ ಕೆಲಸಕಾರ್ಯ ಪೂರ್ಣಗೊಳಿಸಲು ಸಹಾಯವಾಗುವಂತೆ ದಾನಿಗಳಿಂದ ಆರ್ಥಿಕ ಸಹಾಯ ಯಾಚಿಸಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಸಹಾಯ ಮಾಡಲಿಚ್ಚಿಸುವವರು ಭಾರತಿ ಅವರ ಪುಂಜಾಲಕಟ್ಟೆ ಶಾಖೆಯ ಕೆನರಾ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ: ೦೧೫೬೨೨೫೦೦೧೩೧೧೨ (ಐಎಫ್‌ಎಸ್‌ಸಿ: ಸಿಎನ್‌ಆರ್‌ಬಿ ೦೦೧೦೧೫೬) ಸಂಖ್ಯೆಗೆ ಕಳುಹಿಸಿಕೊಡಬಹುದು. (ಎಂಐಸಿಆರ್ ಕೋಡ್: ೫೭೬೦೧೫೦೯೪) ಅಥವಾ ಭಾರತಿಯವರ ಮೊಬೈಲ್ ಸಂಖ್ಯೆ: ೯೦೦೮೫೨೦೯೧೦ ಯನ್ನು ಸಂಪರ್ಕಿಸಬಹುದಾಗಿದೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>