ಕುರುಕ್ಷೇತ್ರ (ಹರಿಯಾಣ): ವ್ಯಕ್ತಿಯೊಬ್ಬನ ಕೈಯನ್ನು ದುಷ್ಕರ್ಮಿಗಳು ಕತ್ತರಿಸಿ, ಅದನ್ನು ಕೊಂಡೊಯ್ದಿರುವ ಘಟನೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದಿದೆ. ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಕ್ಷೇತ್ರ ಹವೇಲಿಯಲ್ಲಿ ಘಟನೆ ನಡೆದಿದ್ದು, ಘಟನೆಯ ಕುರಿತು ತನಿಖೆ ನಡೆಯುತ್ತಿದೆ.
ಜುಗ್ನು(30) ಎಂದು ಗುರುತಿಸಲಾದ ವ್ಯಕ್ತಿ ಕುರುಕ್ಷೇತ್ರ ಹವೇಲಿಯ ಹೊರಗೆ ಕುಳಿತಿದ್ದಾಗ 10-12 ಮಂದಿ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ನಂತ್ರ, ಆತನ ಕೈಯನ್ನು ಕತ್ತರಿಸಿ ತೆಗೆದುಕೊಂಡು ಹೋಗಿದ್ದಾರೆ. ಈ ಏಳೆ ರಕ್ತದ ಮಡುವುನಲ್ಲಿ ಬಿದ್ದಿದ್ದ ಜುಗ್ನುವನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜುಗ್ನುವನ್ನು ಲೋಕನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು ಒಂದೂವರೆ ವರ್ಷಗಳ ಹಿಂದೆ, ಜುಗ್ನು ಅಸ್ಸಾಂದ್‌ನಲ್ಲಿ ಮದ್ಯದ ಗುತ್ತಿಗೆದಾರರ ಮೇಲೆ ಗುಂಡು ಹಾರಿಸಿದ ಆರೋಪವಿದೆ. ಈ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ ಜುಗ್ನು ಮೇಲೆ ನಿನ್ನೆ (ಜನವರಿ 9) ಈ ಹಲ್ಲೆ ನಡೆದಿದೆ.