






ವೇಣೂರು, ಮೇ 29: ವೇಣೂರು ಕೃಷಿಇಲಾಖೆಯಿಂದ ಸದ್ಯಕ್ಕೆ ರೈತರಿಗೆ ಸಿಗುವ ಸಲವತ್ತುಗಳ ಮಾಹಿತಿ ನೀಡಿದ್ದಾರೆ.
ಸಹಾಯಧನದಲ್ಲಿ ಭತ್ತದ ಬಿತ್ತನೆ ಬೀಜ (ಎಂಒ೪), ಟರ್ಪಾಲು, ಸ್ಪಿಂಕ್ಲರ್ ಪೈಪ್, ಯಂತ್ರೋಪಕರಣಗಳಾದ ಪವರ್ ಟಿಲ್ಲರ್, ಪವರ್ ಟ್ರಾಕ್ಟರ್, ಪವರ್ ವೀಡರ್ ಹಾಗೂ ಪವರ್ ಸ್ಪ್ರೇಯರ್‌ಗಳು ಸಹಾಯಧನದಲ್ಲಿ ಲಭ್ಯವಿದ್ದು, ಆಸಕ್ತ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
ದಾಖಲಾತಿಗಳು
ಅರ್ಜಿ, ಆಧಾರ್ ಪ್ರತಿ, ಬ್ಯಾಂಕ್ ಪಾಸ್‌ಬುಕ್ ಪ್ರತಿ, ಆರ್‌ಟಿಸಿ, ಪೊಟೋ ದಾಖಲೆಗಳೊಂದಿಗೆ ವೇಣೂರು ರೈತಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ವೇಣೂರು ರೈತಸಂಪರ್ಕ ಕೇಂದ್ರವನ್ನು ಸಂಪರ್ಕಿಸುವಂತೆ ಕೋರಲಾಗಿದೆ.