
ಅಂಡಿಂಜೆ, ಎ. 20: ಅಂಡಿಂಜೆ ಗ್ರಾ.ಪಂ. ವ್ಯಾಪ್ತಿಯ ವೇಣೂರು-ನಾರಾವಿ ಸಂಪರ್ಕದ ಕೊಕ್ರಾಡಿ ಸರಕಾರಿ ಪ್ರೌಢಶಾಲೆ ಬಳಿ ಇದ್ದ ಸೂಚನಾ ಫಲಕವೊಂದು ಅಡ್ಡಬಿದ್ದಿದೆ.
ಇದು ರಸ್ತೆ ಅಗಲೀಕರಣದ ವೇಳೆ ತೆಗೆದು ಇಟ್ಟದ್ದೋ ಅಥವಾ ನಿರ್ಮಿಸಿದ ಫಲಕ ಇತರ ಕಾರಣಗಳಿಗೆ ಅಡ್ಡಬಿದ್ದದ್ದೋ ಗೊತ್ತಿಲ್ಲ. ಆದರೆ ದಾರಿ ತೋರಿಸಬೇಕಾದ ಫಲಕ ಈಗ ದಾರಿ ತಪ್ಪಿಸುವ ಫಲಕವಾಗಿ ಮಾರ್ಪಟ್ಟಿದೆ. ಸ್ಥಳೀಯ ಜನರಿಗೆ ಮಾರ್ಗಸೂಚಿ ಗೊತ್ತಿದೆ. ಆದರೆ ದೂರ ಊರಿನಿಂದ ಬರುವ ಸಾರ್ವಜನಿಕರು, ಪ್ರಯಾಣಿಕರಿಗೆ ಕೊಕ್ರಾಡಿ ಜಂಕ್ಷನ್‌ನಲ್ಲಿ ದಾರಿಯ ಗೊಂದಲ ಆದಾಗ ಮಾಹಿತಿಗಾಗಿ ಸ್ಥಳೀಯ ಅಂಗಡಿಗಳನ್ನು ಆಶ್ರಯಿಸಬೇಕಾಗಿದೆ. ಈ ಬಗ್ಗೆ ಅಂಡಿಂಜೆ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿಯವರನ್ನು ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್ ವಿಚಾರಿಸಿದ್ದು, ಕೊಕ್ರಾಡಿಯಲ್ಲಿ ಸೂಚನ ಫಲಕ ಅಡ್ಡಬಿದ್ದಿರುವ ಬಗ್ಗೆ ಮಾಹಿತಿ ಇಲ್ಲ. ವಿಚಾರವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
