ಆರಂಬೋಡಿ, ಎ. 19: ಇಲ್ಲಿಯ ಹೊಕ್ಕಾಡಿಗೋಳಿಯಿಂದ ಆರಂಬೋಡಿವರೆಗಿನ ರಸ್ತೆಯಿನ್ನು ರಾಜಮಾರ್ಗವಾಗಲಿದೆ. ಶಾಸಕರ ವಿಶೇಷ ಮುತುರ್ವಜಿಯಿಂದ ಬರೋಬ್ಬರಿ ರೂ. 2 ಕೋಟಿ ಅನುದಾನದಲ್ಲಿ ಈ ರಸ್ತೆಗೆ ಹೊಸ ಚಿತ್ರಣ ನೀಡಲಾಗುತ್ತಿದೆ. ರಶ್ಮಿ ಕನ್‌ಸ್ಟ್ರಕ್ಷನ್ ಕಾರ್ಲ ಅವರು ಇದರ ಕಾಮಗಾರಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ತೀರಾ ಗ್ರಾಮೀಣ ಭಾಗದಲ್ಲಿ ದ್ವಿಪಥ ರಸ್ತೆಯ ನಿರ್ಮಾಣದಿಂದ ಗ್ರಾಮೀಣ ಭಾಗದ ಈ ಪರಿಸರ ಆಕರ್ಷಣೀಯವಾಗಲಿದೆ.