

ಪಡಂಗಡಿ, ಎ. 19: ಹೆದ್ದಾರಿ ಬದಿ ನಿಂತಿದ್ದ ಈಚರ್ ಟಿಪ್ಪರ್‌ಗೆ ಹಿಂಬದಿಯಿಂದ ಬಂದ ಈಚರ್ ಲಾರಿ ಡಿಕ್ಕಿಯೊಡೆದು ಟಿಪ್ಪರ್ ಮುಂದಕ್ಕೆ ಚಲಿಸಿ ಚರಂಡಿಗೆ ಬಿದ್ದ ಪರಿಣಾಮ ಯುಕ್ಲಾಂಪ್ ತುಂಡಾಗಿ ಟಯರ್‌ನ ಆಕ್ಸೆಲ್ ಹಿಂದಕ್ಕೆ ಜಾರಿದೆ.
ಗುರುವಾಯನಕೆರೆ ಕಡೆಯಿಂದ ಬಂದಿದ್ದ ಟಿಪ್ಪರ್ ಪಡಂಗಡಿ ನಂದಿಬೆಟ್ಟದ ಬಳಿ ಹೆದ್ದಾರಿ ಬದಿ ನಿಲ್ಲಿಸಲಾಗಿತ್ತು. ಗುರುವಾಯನಕೆರೆ ಕಡೆಯಿಂದ ಕೋಲ್ಡ್‌ಡ್ರಿಂಕ್ಸ್ ತುಂಬಿಸಿಕೊಂಡು ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್‌ಗೆ ಡಿಕ್ಕಿಯೊಡೆದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.