March 5, 2026
jitendra

ಮಂಗಳೂರು, ಎ. 19: ಮಂಗಳೂರು ಪ್ರೆಸ್‌ಕ್ಲಬ್ ಆಂತರಿಕ ಲೆಕ್ಕಪರಿಶೋಧಕರಾಗಿ ಜಿತೇಂದ್ರ ಕುಂದೇಶ್ವರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಗಳೂರು ಪತ್ರಿಕಾಭವನದಲ್ಲಿ ನಡೆದ ಪದಾಧಿಕಾರಿಗಳ ಚುನಾವಣಾ ಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಮಾಜಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ಜಿತೇಂದ್ರ ಕುಂದೇಶ್ವರ ಅವರಿಗೆ ಪ್ರಮಾಣಪತ್ರ ಹಸ್ತಾಂತರಿಸಿದರು.
ಕಾರ್ಕಳ ಹಿರ್ಗಾನ ಮೂಲದವರರಾದ ಜಿತೇಂದ್ರ ಕುಂದೇಶ್ವರ ಅವರು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ  ಪ್ರಧಾನ ಕಾರ್ಯದರ್ಶಿ ಮತ್ತು ಪತ್ರಕರ್ತರ ಗೃಹನಿರ್ಮಾಣ  ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆಯ್ಕೆಗೆ ಸಹಕರಿಸಿದ್ದಕ್ಕೆ ಅಭಿನಂದನೆ:  ಕುಂದೇಶ್ವರ್ 
ಅವಿರೋಧವಾಗಿ ಆಯ್ಕೆಗೆ ಸಹಕರಿಸಿದ ಪ್ರೆಸ್‌ಕ್ಲಬ್ ಅಧ್ಯಕ್ಷ ಹರೀಶ್ ರೈ ಮತ್ತು ಸರ್ವ ಸದಸ್ಯರಿಗೆ, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಮತ್ತು ಸರ್ವ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ಜಿತೇಂದ್ರ ಕುಂದೇಶ್ವರ ಪ್ರತಿಕ್ರಿಯಿಸಿದ್ದಾರೆ. ಕಾರ್ಕಳ ಮಾಧ್ಯಮ ಬಿಂಬ ಸಂಪಾದಕ ವಸಂತ ಕುಮಾರ್, ಕರಾವಳಿ ನ್ಯೂಸ್ ಸಂಪಾದಕ ಕೃಷ್ಣ ಅಜೆಕಾರ್, ಉದಯಪ್ರಭದ ವರದಿಗಾರ ಎ.ಕೆ. ಉದಯಶಂಕರ್, ನ್ಯೂಸ್ ಕಾರ್ಕಳ ಮುಖ್ಯಸ್ಥರಿಗೂ ಕೃತಜ್ಞತೆಗಳನ್ನು ಸಮರ್ಪಿಸುವುದಾಗಿ ಕುಂದೇಶ್ವರ್ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.