
ಉಡುಪಿ ನಗರದ ಹೊರವಲಯದ ಅಂಬಾಗಿಲು ಎಂಬಲ್ಲಿ ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಕೆಎಂಸಿ ಉದ್ಯೋಗಿ ಬಾಲು ಮೃತ ಸವಾರರಾಗಿದ್ದಾರೆ.ಅಂಬಾಗಿಲು ಜಂಕ್ಷನ್ ಸಮೀಪ ನಿಂತಿದ್ದ ಲಾರಿಗೆ ಇವರ ಸ್ಕೂಟರ್ ಡಿಕ್ಕಿ ಹೊಡೆದಿದೆ. ಇದರಿಂದ ಬಾಲು ಅವರ ತಲೆಗೆ ತೀವ್ರ ಏಟು ಬಿದ್ದಿದೆ.
ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೆ ಸಂಜೆ ನಿಧನರಾಗಿದ್ದಾರೆ.
