ವೇಣೂರು, ಎ. 18: ಬಜಿರೆ ಶ್ರೀ ಕ್ಷೇತ್ರ ಮುದ್ದಾಡಿ ಶ್ರೀ ಮಾರವಾಂಡಿ ಶ್ರೀ ಕೊಡಮಣಿತ್ತಾಯ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ ಹಾಗೂ ಧಾರ್ಮಿಕಸಭೆಯು ಎ. 23ರಿಂದ 24ರವರೆಗೆ ಜರಗಲಿದೆ.
ಎ. 23ರಂದು ಬೆಳಿಗ್ಗೆ 10 ಗಂಟೆಯಿಂದ ಕುಂಞಡಿ ಲಕ್ಷ್ಮೀನಾರಾಯಣ ಅಸ್ರಣ್ಣರವರ ಪೌರೋಹಿತ್ಯದಲ್ಲಿ ಶುದ್ಧ ಕಲಶ, ಪ್ರತಿಷ್ಠೆ, ಸಂಜೆ ಮಾರವಾಂಡಿ ಶ್ರೀ ಕೊಡಮಣಿತ್ತಾಯ, ಶ್ರೀ ಮೈಸಂದಾಯ ಹಾಗೂ ಕಲ್ಲುಡ ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ಜರಗಲಿದೆ. ಎ. 24ರಂದು ಸಂಜೆ 7 ರಿಂದ ಬಲಿ ಉತ್ಸವ, ರಾತ್ರಿ 8 ಗಂಟೆಯಿಂದ ಧಾರ್ಮಿಕಸಭೆ ಜರಗಲಿದೆ. ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಸತೀಶ್ಚಂದ್ರ ಸಭಾಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದೇಲಂಪುರಿ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಭಟ್, ವೇಣೂರು ವರ್ತಕರ ಸಂಘದ ಅಧ್ಯಕ್ಷರಾಗಿರುವ ಕೆ. ಭಾಸ್ಕರ ಪೈ ಮಹಾಲಸ ಅವರು ಭಾಗವಹಿಸಲಿದ್ದಾರೆ. ಬಳಿಕ ರಾತ್ರಿ ಗಂಟೆ 9-30ರಿಂದ ಶ್ರೀ ಬ್ರಹ್ಮಬೈದರ್ಕಳ ಮತ್ತು ಮಾಣಿಬಾಲೆ ನೇಮೋತ್ಸವ ಜರಗಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರರಾದ ಯಂ. ವಿಜಯರಾಯ ಅಧಿಕಾರಿ ಮಾರಗುತ್ತು ಹಾಗೂ ಸುರೇಶ್ ಕುಮಾರ್ ಅರಿಗ ಪೆರ್ಮಾಣುಗುತ್ತು ಅವರು ತಿಳಿಸಿದ್ದಾರೆ.