ಮರೋಡಿ, ಎ. 17: ಮರೋಡಿ-ಪೆರಾಡಿ ಸಂಪರ್ಕ ರಸ್ತೆಯ ಮರೋಡಿ ಕಿರುಸೇತುವೆಯ ಬಳಿ ರಸ್ತೆ ಕುಸಿದು ಸಂಚಾರಕ್ಕೆ ತೀರಾ ಅಪಾಯ ತಂದೊಡ್ಡಿದೆ.
ಕಿರುಸೇತುವೆಗೆ ತಾಗಿಕೊಂಡೇ ರಸ್ತೆ ಬದಿ ಕುಸಿದಿದ್ದು, ಅಲ್ಪ ಪ್ರಮಾಣದಲ್ಲಿದ್ದ ಕುಸಿತ ಇಂದು ಡಾಮಾರು ರಸ್ತೆಯನ್ನೇ ನುಂಗಿದೆ. ಸೇತುವೆ ಬದಿ ತಡೆಗೋಡೆಯಾಗಿ ಕಟ್ಟಲಾದ ಕಲ್ಲುಗಳು ಜರಿದಿದ್ದು, ಅಲ್ಪ ತಿರುವು ಪ್ರದೇಶದಲ್ಲಿರುವ ಈ ಕುಸಿತ ರಾತ್ರಿ ಸಂಚಾರದಲ್ಲಂತೂ ಅಪಾಯ ತಪ್ಪಿದ್ದಲ್ಲ. ಮಳೆಗಾಲದ ಮೊದಲು ದುರಸ್ತಿ ಕಾರ್ಯ ನಡೆಯದಿದ್ದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಿ ಸಂಚಾರ ಕಡಿತಗೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ ಇಲ್ಲಿ ಯಾವುದೇ ಸುರಕ್ಷತಾ ಕ್ರಮ ಅಥವಾ ಸೂಚನಾ ಫಲಕವನ್ನಾಗಲಿ ಅಳವಡಿಸಿಲ್ಲ. ತಕ್ಷಣವೇ ಸಂಬಂಧಿತ ಇಲಾಖಾಧಿಕಾರಿಗಳು ಗಮನ ಹರಿಸಬೇಕಿದೆ.