ವೇಣೂರು, ಎ.16: ಒಂದೆಡೆ ಪಂಚಾಯತುಗಳು ಸ್ವಚ್ಛ ಗ್ರಾಮ, ಪ್ಲಾಸ್ಟಿಕ್ ಮುಕ್ತ ಗ್ರಾಮ ಎಂದು ಘೋಷಿಸಿಕೊಳ್ಳಲು ನಾನಾ ಯೋಜನೆಗಳನ್ನು ರೂಪಿಸುತ್ತಿದ್ದರೆ ಮತ್ತೊಂದೆಡೆ ಅಲ್ಲಲ್ಲಿ ಸಾರ್ವಜನಿಕ ರಸ್ತೆ ಬದಿಗಳಲ್ಲೇ ರಾಶಿರಾಶಿ ತ್ಯಾಜ್ಯಗಳು ಕಂಡು ಬರುತ್ತವೆ.
ವೇಣೂರು ಗ್ರಾ.ಪಂ. ವ್ಯಾಪ್ತಿಯ ಬಜಿರೆ ಗ್ರಾಮದ ಮುದ್ದಾಡಿಯ ಜನವಸತಿ ಪ್ರದೇಶದ ರಸ್ತೆ ಬದಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸುರಿಯಲಾಗಿದ್ದು, ಸ್ವಚ್ಛ ಭಾರತ್ ಪರಿಕಲ್ಪನೆಗೆ ಸವಾಲು ಎಸೆದಂತಾಗಿದೆ. ಪಂಚಾಯತ್‌ನ ಘನತ್ಯಾಜ್ಯ ವಿಲೇವಾರಿ ಘಟಕದ ಅಣತಿ ದೂರದಲ್ಲೇ ಈ ಪಾಸ್ಟಿಕ್ ತ್ಯಾಜ್ಯದ ರಾಶಿ ಕಂಡು ಬಂದಿದೆ. ತಕ್ಷಣ ಪಂಚಾಯತ್‌ನ ಅಧಿಕಾರಿಗಳು ಈ ಬಗ್ಗೆ ಗಮನ ನೀಡಬೇಕಾಗಿದೆ.