

ಅಂಡಿಂಜೆ, ಎ. 16: ತಾನು ವಿದ್ಯೆ ಕಲಿತ ಶಾಲೆಗೆ ಏನಾದರೂ ಕೊಡುಗೆ ನೀಡುವುದು ಖಾಸಗಿ ಶಾಲೆಗಳಲ್ಲಿ ಮಾಮೂಲಿ ಆಗಿರುತ್ತದೆ. ಆದರೆ ಸರಕಾರಿ ಶಾಲೆಗಳಲ್ಲೂ ವಿದ್ಯಾರ್ಥಿಗಳು ವ್ಯಾಮೋಹ ತೋರಿಸುತ್ತಾರೆ ಅನ್ನುವುದನ್ನು ಅಂಡಿಂಜೆ ಸ.ಉ.ಪ್ರಾ. ಶಾಲೆಯ ವಿದ್ಯಾರ್ಥಿನಿಯೋರ್ವಳು ತೋತಿಸಿಕೊಟ್ಟಿದ್ದಾಳೆ.
೭ನೇ ತರಗತಿಯ ಶೃತಿ ಅನ್ನುವ ವಿದ್ಯಾರ್ಥಿನಿ ಶಾಲೆಗೆ ಫ್ಯಾನ್ ಕೊಡುಗೆ ನೀಡಿದ್ದು, ಮುಖ್ಯಶಿಕ್ಷಕ ಗುರುಮೂರ್ತಿ ಅವರು ಕೊಡುಗೆಯನ್ನು ವಿದ್ಯಾರ್ಥಿನಿಯಿಂದ ಸ್ವೀಕರಿಸಿದರು.