
ವೇಣೂರು, ಎ. 15: ವೇಣೂರು ಪೊಲೀಸ್ ಠಾಣೆಗೆ ಹೊಸದಾಗಿ ನಾಲ್ವರು ಪೊಲೀಸ್ ಸಿಬ್ಬಂದಿಗಳು ನಿಯೋಜನೆಗೊಂಡಿದ್ದಾರೆ. ಪೊಲೀಸ್ ತರಬೇತಿ ಮುಗಿಸಿರುವ ನಿವೃತ್ತ ಯೋಧ ರೋಬಿನ್ ಜೋಸೆಫ್, ಸಂತೋಷ್ ಕುಮಾರ್, ಮೋಹನ್ ಹಾಗೂ ಮಹಿಳಾ ಕಾನ್ಸ್‌ಸ್ಟೇಬಲ್ ಕಾವೇರಿ ಅವರನ್ನು ವೇಣೂರು ಠಾಣೆಗೆ ನಿಯೋಜಿಸಿದ್ದು, ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹಲವು ಸಿಬ್ಬಂದಿ ವರ್ಗಾವಣೆಗೊಂಡಿದ್ದರಿಂದ ಇಲ್ಲಿ ಹುದ್ದೆಗಳು ಖಾಲಿಯಾಗಿದ್ದವು.
