March 5, 2026
tumbelekki cercle copy

ಆರಂಬೋಡಿ, ಎ. 15: ಇಲ್ಲಿಯ ಗುಂಡೂರಿ ಗ್ರಾಮದ ತುಂಬೆದಲೆಕ್ಕಿಯಲ್ಲಿ ಶ್ರೀ ಗುರುನಾರಾಯಣ ವೃತ್ತ ನಿರ್ಮಾಣ ಆಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
ಕಳೆದೆರಡು ವರ್ಷಗಳ ಹಿಂದೆ ಇಲ್ಲಿಯ ಕೆಲವು ಬಿಲ್ಲವ ಮುಖಂಡರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ತುಂಬೆದಲೆಕ್ಕಿಯಲ್ಲಿ ಶ್ರೀ ಗುರುನಾರಾಯಣಸ್ವಾಮಿ ವೃತ್ತ ನಿರ್ಮಿಸುವ ಬಗ್ಗೆ ಆರಂಬೋಡಿ ಗ್ರಾ.ಪಂ.ಗೆ ಲಿಖಿತ ಬೇಡಿಕೆ ಸಲ್ಲಿಸಿದ್ದರು. ಅನುದಾನದ ಕೊರತೆ ಮತ್ತು ವಿವಿಧ ಗೊಂದಲಗಳಿಂದ ವೃತ್ತ ನಿರ್ಮಾಣ ಕಾಮಗಾರಿ ಮುಂದುವರಿದಿರಲಿಲ್ಲ. ಬಳಿಕ ವಿರೋಧ ವ್ಯಕ್ತಪಡಿಸಿದವರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಸ್ಥಳೀಯಾಡಳಿತ ಕಾಮಗಾರಿ ನಡೆಸಿದ್ದು, ಶೇ. ೭೦ರಷ್ಟು ಕಾಮಗಾರಿ ಮುಗಿದಿದೆ.

About The Author

Leave a Reply

Your email address will not be published. Required fields are marked *

You cannot copy content of this page.