

ವೇಣೂರು, ಎ. 15: ಇತಿಹಾಸ ಪ್ರಸಿದ್ಧ ಇತ್ತೀಚೆಗೆ ಶಿಲಾಮಯ ದೇವಾಲಯವಾಗಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನೆರವೇರಿರುವ ವೇಣೂರು ಶ್ರೀ ಮಹಾಲಿಂಗೇಶ್ವರದ ಜಾತ್ರಾ ಮಹೋತ್ಸವಕ್ಕೆ ಎ. ೧೪ರಂದು ಚಾಲನೆ ದೊರೆಯಿತು.
ಬೆಳಿಗ್ಗೆ ಪುಣ್ಯಾಹಃ, ಗಣಯಾಗ, ತೋರಣ ಮುಹೂರ್ತ, ಏಕಾದಶ ರುದ್ರಾಭಿಷೇಕ, ನವಕ ಪ್ರಧಾನ, ಕಂಕಣಬಂಧ ಜರಗಿ ಬೆಳಿಗ್ಗೆ ೧೧-೩೦ಕ್ಕೆ ಧ್ವಜಾರೋಹಣ ನೆರವೇರಿಸಿ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಸಂಜೆ ಪ್ರಭಾಕರ ಪ್ರಭು ವೇಣೂರು ಅವರ ವಿವರಣೆಯಲ್ಲಿ ಪ್ರಜ್ಞಾ ಪ್ರಭು ವೇಣೂರು ಅವರ ಗಾಯನದೊಂದಿಗೆ ಗಮಕ ವಾಚನ ಸಾಂಸ್ಕೃತಿಕ ಕಾರ್ಯಕ್ರಮ ಜರಗತು. ಜಾತ್ರಾ ಮಹೋತ್ಸವವು ಎ. 23ರವರೆಗೆ ಜರಗಲಿದೆ.
ಮೇಷಸಂಕ್ರಮಣವಾದ ನಿನ್ನೆ ಬೆಳಿಗ್ಗೆ ಸೀಮೆಯ ಅರಸರಾದ ಡಾ. ಪದ್ಮಪ್ರಸಾದ ಅಜಿಲರು ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಧ್ವಜಾರೋಹಣದ ವೇಳೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಯನ್. ಪುರುಷೋತ್ತಮ ರಾವ್, ಸದಸ್ಯರು ಹಾಗೂ ಊರ ಭಕ್ತಾಧಿಗಳು ಉಪಸ್ಥಿತರಿದ್ದರು.