ಅಣ್ಣನನ್ನು ಕೊಂದವರ ಜೈಲಿಗಟ್ಟಲು ಕಷ್ಟಪಟ್ಟು ಓದಿ ವಕೀಲನಾಗಿ ಕೇಸ್ ಗೆದ್ದ ಸಹೋದರ

ಮುಂಬೈ : ತನ್ನ ಅಣ್ಣನನ್ನು ಕೊಂದವರನ್ನು ಜೈಲಿಗಟ್ಟಲು, ನ್ಯಾಯದ ಪರವಾಗಿ ಹೋರಾಟ ಮಾಡಲು ತನ್ನ ಜೀವನವನ್ನೇ ಮುಡುಪಾಗಿಟ್ಟ ಯುಕನೊಬ್ಬನ ಕಥೆ ವೈರಲ್ ಆಗಿದೆ. ಜೊತೆಗೆ ಅಣ್ಣನ ಕೊಂದವರ ಜೈಲಿಗಟ್ಟಲು ವಕೀಲನಾಗಿ, ಕೇಸ್ ಕೂಡ ಆ ಸಹೋದರ ಗೆದ್ದಿದ್ದಾನೆ. 2011ರಲ್ಲಿ ಮುಂಬೈನ ಅಂಧೇರಿಯ ಅಂಬೋಲಿ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಕೀನನ್ ಮತ್ತು ರುಬೆನ್ ಎಂಬ ಯುವಕರು ಪಾರ್ಟಿ ಮಾಡಿ, ಮನೆಗೆ ತೆರಳುವಾಗ ಕೆಲವು ಮಂದಿ ಕಿಚಾಯಿಸಿದ್ದರು. ಇದು ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸಿದ್ದರು. ಈ ವೇಳೆ ಹಲ್ಲೆ ನಡೆದು ಕೀನನ್ ಮತ್ತು ರುಬೆನ್ ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಕೀನನ್ ಸಹೋದರ ಶೇನ್ ಸ್ಯಾಂಟೋಸ್‌ಗೆ ಕೇವಲ 19 ವರ್ಷದವನಾಗಿದ್ದ. ಹೀಗೆ ಅಣ್ಣ ಕೀನನ್ ಹಾಗೂ ಆತನ ಸ್ನೇಹಿತ ರುಬೆನ್ ಕೊಂದವನ್ನು ಜೈಲಿಗಟ್ಟುವ ಛಲವನ್ನು ಅಂದು ಕೀನನ್ ಸಹೋದರ ಶೇನ್ ತೊಟ್ಟನು. ಕೊಲೆಗೆಡುಕರಿಗೆ ತಕ್ಕ ಶಾಸ್ತಿ ಮಾಡಲೇಬೇಕೆಂದು ನಿರ್ಧರಿಸಿದ ಶೇನ್ ಸ್ಯಾಂಟೋಸ್ ಕಷ್ಟಪಟ್ಟು ಓದಿ 2020ರಲ್ಲಿ ಕಾನೂನು ಪದವಿ ಪಡೆದಿದ್ದ. ಆ ಬಳಿಕ ಕೋರ್ಟ್ ಗೆ ಸಹೋದರ ಮತ್ತು ಗೆಳೆಯನ ಕೊಲೆ ಪ್ರಕರಣದ ವಿಚಾರಣೆಗೆ ತಾನೇ ಪ್ರಬಲ ವಾದ ಕೂಡ ಮಂಡಿಸಿದರು. ಈ ಪರಿಣಾಮವಾಗಿ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಜಿತೇಂದ್ರ ರಾಣಾ ಮತ್ತು ಆತನ ಮೂವರು ಗೆಳೆಯರಿಗೆ ಮುಂಬೈ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಮೂಲಕ ಶೇನ್ ಸ್ಯಾಂಟೋಸ್ ನ್ಯಾಯದ ಪರ ಹೋರಾಡಿ ಗೆಲುವು ಸಾಧಿಸಿದ್ದಾರೆ.

Check Also

ಬೆಳ್ತಂಗಡಿ : ಮನೆಯಂಗಳದಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗು ಕೆರೆಗೆ ಬಿದ್ದು ಮೃತ್ಯು

ಬೆಳ್ತಂಗಡಿ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವೊಂದು ತೋಟದ ಕೆರೆಯ ಬಳಿಗೆ ಹೋಗಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಗುರುವಾರ ಧರ್ಮಸ್ಥಳದ …

Leave a Reply

Your email address will not be published. Required fields are marked *

You cannot copy content of this page.