ವೇಣೂರು, ಜೂ. 8: ಮೂಡುಕೋಡಿಯ ಶ್ರೀಮತಿ ಕುಮುದಿನಿ ಮತ್ತು ಲಿಂಗಪ್ಪ ದಂಪತಿಯ ಪುತ್ರಿ, ಮೂಡಬಿದಿರೆ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಶ್ಲೇಷಣಾತ್ಮಕ ರಾಸಾಯಣಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸುಕನ್ಯ ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ.
ಶ್ರೀಮತಿ ಸುಕನ್ಯಾರವರು ಲೋಲ್ಟಾಮೆಟ್ರಿಕ್ ಸ್ಟಡೀಸ್ ಆಫ್ ಸಮ್ ಬಯೋಲಾಜಿಕಲ್ ಇಂಪಾರ್ಟೆಂಟ್ ಆರ್ಗನಿಕ್ ಕಂಪೌಂಡ್ಸ್ ಎಟ್ ಡಿಫರೆಂಟ್ ಮೋಡಿಫೈಡ್ ಇಲೆಕ್ಟ್ರೋಡ್ಸ್ ಎಂಬ ಸಂಶೋಧನ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ. ಕುವೆಂಪು ವಿವಿ ಕೈಗಾರಿಕಾ ರಾಸಾಯನಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಇ. ಕುಮಾರಸ್ವಾಮಿ ಮಾರ್ಗದರ್ಶನ ನೀಡಿದ್ದರು. ಪತಿ ಮಂಗಳೂರಿನ ಸಂತೋಷ್ ದೇವಾಡಿಗರ ಜತೆ ನೆಲೆಸಿದ್ದಾರೆ.