March 5, 2026
pa

ವೇಣೂರು, ಜೂ. 3: ಇಲ್ಲಿಯ ಸುಸಜ್ಜಿತ ಆಕರ್ಷಕ ಬಸ್ಸು ತಂಗುದಾಣ ಕಟ್ಟಡದ ೧೧ ಅಂಗಡಿ ಕೋಣೆಗಳನ್ನು ಏಲಂ ಮಾಡುವ ಬಗ್ಗೆ ವೇಣೂರು ಗ್ರಾ.ಪಂ. ಅಧಿಕೃತ ಪ್ರಕಟಣೆ ಹೊರಡಿಸಿದೆ.
ಈ ಬಗ್ಗೆ ಮೇ 30ರಂದು ಜರಗಿದ್ದ ಸಾಮಾನ್ಯಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು. ಜೂ. 15ರಂದು ಪೂರ್ವಾಹ್ನ 11 ಗಂಟೆಗೆ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಐದು ವರ್ಷಗಳ ಅವಧಿಗೆ ಬಹಿರಂಗ ಏಲಂಗೆ ಕರೆಯಲಾಗಿದೆ.

ಆಸಕ್ತರು ಜೂ. 13ರಂದು ಪಂಚಾಯತ್ ನಿಗಧಿ ಪಡಿಸಿದ ಟೆಂಡರ್ ಡಿಪೋಜಿಟ್ ಪಾವತಿಸಿ ಹೆಸರು ನೋಂದಾಯಿಸುವಂತೆ ಪಂಚಾಯತ್ ತಿಳಿಸಿದೆ. ಮೀಸಲಾತಿ, ಇಎಂಡಿ ಮೊತ್ತ ಸೇರಿದಂತೆ ಹೆಚ್ಚಿನ ಮಾಹಿತಿ ಪಂಚಾಯತ್ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

About The Author

Leave a Reply

Your email address will not be published. Required fields are marked *

You cannot copy content of this page.