ದೇಶದ ಇತಿಹಾಸದಲ್ಲೇ ಭೀಕರ ರೈಲು ಅಪಘಾತವೇಣೂರಿನ ಮೂವರು ಸೇರಿದಂತೆ ದ.ಕ. ಜಿಲ್ಲೆಯ 21 ಮಂದಿ ಪಾರಾಗಿದ್ದೇಗೆ ಗೊತ್ತಾ?!

ಗಡಕ್ ಎಂಬ ಶಬ್ದ ಬಂತು, ರೈಲು ನಿಂತಿತು!
ವಿಚಾರ ತಿಳಿದಾಗ ಗದ್ಗತೀತರಾದೆವು, ಅಪಘಾತದ ರೈಲಿನಲ್ಲಿದ್ದ ವೇಣೂರು ಯಾತ್ರಿಗಳ ಅನುಭವದ ಮಾತು

ಭುವನೇಶ್ವರ, ಜೂ. 3: ದೇಶದ ಇತಿಹಾಸದಲ್ಲೇ ಭೀಕರ ರೈಲು ಅಪಘಾತ ನಡೆದ ಘಟನೆ ಒಡಿಶಾದ ಬಾಲಸೋರ್ ಪ್ರದೇಶದ ಬಹನಾಗಾ ರೈಲು ನಿಲ್ದಾಣ ಸಮೀಪ ನಿನ್ನೆ ಸಂಜೆ 7-10ರ ಸುಮಾರಿಗೆ ನಡೆದಿದೆ. ಹಳಿತಪ್ಪಿದ ರೈಲು ಪ್ಯಾಸೆಂಜರ್ ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಬಸಕ್ಕೆ ನಾಲ್ಕು ಬೋಗಿಗಳು ಪಲ್ಟಿ ಹೊಡೆದಿವೆ. ಪರಿಣಾಮ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು 900 ಜನರು ಗಾಯಗೊಂಡಿದ್ದಾರೆ. ಮೂರನೇ ಸರಕು ಸಾಗಣೆ ರೈಲು ಕೂಡ ಈ ಅಪಘಾತದಲ್ಲಿ ಸಿಲುಕಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಶಾಲಿಮಾರ್ & ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣ ಸಮೀಪ ಗೂಡ್ಸ್ ರೈಲಿಗೆ ಗುದ್ದಿದೆ. ಆಗ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಕೊನೆಯ 4 ಬೋಗಿ ಹಳಿತಪ್ಪಿವೆ.

ದೇಶದ ಇತಿಹಾಸದಲ್ಲೇ ಭೀಕರ ಅಪಘಾತ
ಒಡಿಶಾದ ವಿಶೇಷ ಪರಿಹಾರ ಆಯುಕ್ತರ ಕಚೇರಿ ಸಿಬ್ಬಂದಿ ಸೇರಿದಂತೆ ರಕ್ಷಣಾ ಸಿಬ್ಬಂದಿ ಅಪಘಾತ ಸಂಭವಿಸಿರುವ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಲವು ಬೋಗಿಗಳು ಹಳತಪ್ಪಿ ಬಿದ್ದಿರುವ ಪರಿಣಾಮ ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವವೂ ಇದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ಇರುವ ಎಲ್ಲ ಸೌಲಭ್ಯ ರೈಲ್ವೆ ಇಲಾಖೆ ಒದಗಿಸಿದೆ. ದೇಶದ ಇತಿಹಾಸದಲ್ಲೇ ನಡೆದಿರುವ ಭೀಕರ ರೈಲು ಅಪಘಾತಗಳಲ್ಲಿ ಇದೂ ಒಂದಾಗಿದೆ ಎನ್ನಲಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ೧೧೦ ಜನ ಇವರು ಬೆಂಗಳೂರಿನಿಂದ ಕೊನೆಯ S೫, S೬, S೭ ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ರೈಲು ನಿನ್ನೆ (ಜೂ.೦2) ಮಧ್ಯಾಹ್ನ ಕೋಲ್ಕತ್ತಾ ಬಳಿ ಇಂಜಿನ್ ಬದಲಿಸಿದೆ. ಇದರಿಂದ ಕಳಸ ತಾಲೂಕಿನ 110 ಜನ ರೈಲಿನ ಮೊದಲ ಬೋಗಿಗೆ ಶಿಫ್ಟ್ ಆಗಿದ್ದರು. ಮೊದಲ ಬೋಗಿಗೆ ಶಿಫ್ಟ್ ಆದ ಹಿನ್ನೆಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಕೊನೆಯ ೩ ಬೋಗಿಗಳಿಗೆ ರೈಲು ಡಿಕ್ಕಿ ಹೊಡೆದಿದೆ.

ವೇಣೂರಿನ ಮೂವರು, ಬೆಳ್ತಂಗಡಿ ತಾಲೂಕಿನ 21ಮಂದಿ
ಬೆಳ್ತಂಗಡಿ ತಾಲೂಕಿನ ವೇಣೂರಿನ ಮೂವರು ಮಹಿಳೆಯರು ಅಪಾಯದಿಂದ ಪಾರಾಗಿದ್ದಾರೆ. ಮಮತಾ ಪ್ರಸಾದ್ ಜೈನ್, ಆಶಾಲತಾ ಜೈನ್ ಹಾಗೂ ದೀಪಾಶ್ರೀ ಕತ್ತೋಡಿ ಅಪಾಯದಿಂದ ಪಾರಾದವರು. ಇವರು ಜೈನರ ತೀರ್ಥಕ್ಷೇತ್ರಗಳಿಗೆ ಯಾತ್ರೆ ಹೊರಟಿದ್ದರು. ಇವರು ವೇಣೂರಿನಿಂದ ಕಳಸಕ್ಕೆ ತೆರಳಿ ಅಲ್ಲಿಂದ ೧೧೦ ಮಂದಿ ಯಾತ್ರಿಗಳು ಬಸ್ಸಿನ ಮೂಲಕ ಬೆಂಗಳೂರಿಗೆ ತೆರಳಿ ಅಲ್ಲಿಂದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಮೂಲಕ ಪ್ರಯಾಣ ಬೆಳೆಸಿದ್ದರು.

ಗಡಕ್ ಎಂಬ ಶಬ್ದ ಬಂತು, ರೈಲು ನಿಂತಿತು!
ವಿಚಾರ ತಿಳಿದಾಗ ಗದ್ಗತೀತರಾದೆವು


ಅಪಘಾತವಾದ ರೈಲಿನಲ್ಲಿದ್ದ ಯಾತ್ರಿ ಅಶಾಲತಾ ವೇಣೂರು ಅವರು ರೂರಲ್‌ಎಕ್ಸ್‌ಪ್ರೆಸ್ ನ್ಯೂಸ್ ಜತೆ ಮಾತನಾಡಿ, ಜೂ. ೧ರಂದು ಬೆಳಿಗ್ಗೆ ಬೆಂಗಳೂರಿನಿಂದ ಕಲ್ಕತ್ತಕ್ಕೆ ಹೊರಟಿದ್ದೆವು.
ಉಜಿರೆ, ಮೂಡಬಿದಿರೆ ಮಂಗಳೂರು ಸೇರಿದಂತೆ ದ.ಕ. ಜಿಲ್ಲೆಯ ೨೧ ಮಂದಿ ಇದ್ದೇವೆ. ನಾವು ಸುಮಾರು ನಿನ್ನೆ ಸಂಜೆ ೭.೩೦ರ ಗಂಟೆಗೆ ಪ್ರಯಾಣಿಸುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ಏಕಾಏಕಿ ಶಬ್ದದೊಂದಿಗೆ ಇಡೀ ರೈಲು ಅಲುಗಾಡಿದ ಅನುಭವ ಆಯಿತು.
ತಕ್ಷಣ ರೈಲನ್ನು ನಿಲ್ಲಿಸಿದರು. ಏನಾಯಿತು ಎಂದು ತಿಳಿದುಕೊಳ್ಳುವಷ್ಟರಲ್ಲಿ ರೈಲಿನ ಕೊನೆಯ ೪ ಬೋಗಿಗಳಿಗೆ ಬೇರೊಂದು ರೈಲು ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಬಂತು. ವಿಚಾರ ತಿಳಿದು ಗದ್ಗತೀತರಾದೆವು. ಕೆಲವರು ಘಟನಾ ಸ್ಥಳಕ್ಕೆ ಹೋದರು. ನಾವು ಘಟನಾ ಸ್ಥಳಕ್ಕೆ  ತೆರಳಲಿಲ್ಲ. ಮಧ್ಯರಾತ್ರಿ ೧.೩೦ರ ಗಂಟೆಗೆ ರೈಲು ಮತ್ತೆ ಹೊರಟಿತು. ೫ ಸುಮಾರು ಐದು ಗಂಟೆಗಳ ಕಾಲ ರಾತ್ರಿಯಿಡೀ ಕಾಡುಪ್ರದೇಶದಲ್ಲಿ ಕಳೆಯುವಂತಾಯಿತು. ಮೇ ೩೧ರಂದು ವೇಣೂರಿನಿಂದ ಹೊರಟಿದ್ದೇವು.

ಇನ್ನು ಭೀಕರ ರೈಲ್ವೆ ಅಪಘಾತದ ಹಿನ್ನೆಯಲ್ಲಿ ಒಡಿಶಾ ಸರ್ಕಾರ ಒಂದು ದಿನ ಶೋಕಾಚರಣೆ ಘೋಷಣೆ ಮಾಡಿದ್ದು, ಜೂನ್ ೩ರಂದು ಯಾವುದೇ ಸಂಭ್ರಮಾಚರಣೆ ಮಾಡುವಂತಿಲ್ಲ ಎಂದು ಸೂಚನೆ ನೀಡಿದೆ. ಘಟನಾ ಸ್ಥಳಕ್ಕೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಳಿ ತಪ್ಪಿದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಂತ್ರಸ್ತರ ನೆರವಿಗೆ ಸಹಾಯವಾಣಿ ಸಂಖ್ಯೆ ಪ್ರಕಟ
 ಬೆಂಗಳೂರು 080-22356409
ಬಂಗಾರ್‌ಪೇಟ್ 08153 255253
ಕುಪ್ಪಂ : 8431403419
ಎಸ್‌ಎಂವಿಬಿ 09606005129
ಕೆಜೆಎಂ 88612 03980

ಸಂತ್ರಸ್ತ ಕುಟುಂಬಕ್ಕೆ ಪ್ರಧಾನಿ ಮೋದಿ ಅಭಯ
ಇಡೀ ದೇಶಕ್ಕೆ ಒಡಿಶಾ ರೈಲು ಅಪಘಾತದ ಸುದ್ದಿ ಸಿಡಿಲಿನಂತೆ ಅಪ್ಪಳಿಸಿದೆ. ಹಾಗೇ ಪ್ರಧಾನಿ ಮೋದಿ ಅವರು ಅಪಘಾತದ ಕುರಿತು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ‘ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದಿಂದ ಸಂಕಟವಾಗಿದೆ. ಈ ದುಃಖದ ಸಮಯದಲ್ಲಿ, ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ಹೇಳಲು ಬಯಸುವೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ರೈಲ್ವೆ ಸಚಿವರ ಜತೆ ಮಾತನಾಡಿದ್ದೇನೆ ಹಾಗೂ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದಿದ್ದೇನೆ. ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

Check Also

ಬೆಳ್ತಂಗಡಿ : ಮನೆಯಂಗಳದಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗು ಕೆರೆಗೆ ಬಿದ್ದು ಮೃತ್ಯು

ಬೆಳ್ತಂಗಡಿ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವೊಂದು ತೋಟದ ಕೆರೆಯ ಬಳಿಗೆ ಹೋಗಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಗುರುವಾರ ಧರ್ಮಸ್ಥಳದ …

Leave a Reply

Your email address will not be published. Required fields are marked *

You cannot copy content of this page.