

ಭುವನೇಶ್ವರ, ಜೂ. ೩: ದೇಶದ ಇತಿಹಾಸದಲ್ಲೇ ಭೀಕರ ರೈಲು ಅಪಘಾತ ನಡೆದ ಘಟನೆ ಒಡಿಶಾದ ಬಾಲಸೋರ್ ಪ್ರದೇಶದ ಬಹನಾಗಾ ರೈಲು ನಿಲ್ದಾಣ ಸಮೀಪ ನಿನ್ನೆ ಸಂಜೆ ೭.೩೦ರ ಸುಮಾಎರಿಗೆ ನಡೆದಿದೆ. ಹಳಿತಪ್ಪಿದ ರೈಲು ಪ್ಯಾಸೆಂಜರ್ ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಬಸಕ್ಕೆ ನಾಲ್ಕು ಬೋಗಿಗಳು ಪಲ್ಟಿ ಹೊಡೆದಿವೆ. ಪರಿಣಾಮ ೨೦೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ೯೦೦ ಜನರು ಗಾಯಗೊಂಡಿದ್ದಾರೆ. ಮೂರನೇ ಸರಕು ಸಾಗಣೆ ರೈಲು ಕೂಡ ಈ ಅಪಘಾತದಲ್ಲಿ ಸಿಲುಕಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ದೇಶದ ಇತಿಹಾಸದಲ್ಲೇ ಭೀಕರ ಅಪಘಾತ
ಒಡಿಶಾದ ವಿಶೇಷ ಪರಿಹಾರ ಆಯುಕ್ತರ ಕಚೇರಿ ಸಿಬ್ಬಂದಿ ಸೇರಿದಂತೆ ರಕ್ಷಣಾ ಸಿಬ್ಬಂದಿ ಅಪಘಾತ ಸಂಭವಿಸಿರುವ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಲವು ಬೋಗಿಗಳು ಹಳತಪ್ಪಿ ಬಿದ್ದಿರುವ ಪರಿಣಾಮ ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವವೂ ಇದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ಇರುವ ಎಲ್ಲ ಸೌಲಭ್ಯ ರೈಲ್ವೆ ಇಲಾಖೆ ಒದಗಿಸಿದೆ. ದೇಶದ ಇತಿಹಾಸದಲ್ಲೇ ನಡೆದಿರುವ ಭೀಕರ ರೈಲು ಅಪಘಾತಗಳಲ್ಲಿ ಇದೂ ಒಂದಾಗಿದೆ ಎನ್ನಲಾಗುತ್ತಿದೆ.
ವೇಣೂರಿನ ಮೂವರು, ಬೆಳ್ತಂಗಡಿ ತಾಲೂಕಿನ ೨೧ಮಂದಿ
ಬೆಳ್ತಂಗಡಿ ತಾಲೂಕಿನ ವೇಣೂರಿನ ಮೂವರು ಮಹಿಳೆಯರು ಅಪಾಯದಿಂದ ಪಾರಾಗಿದ್ದಾರೆ. ಮಮತಾ ಪ್ರಸಾದ್ ಜೈನ್, ಆಶಾಲತಾ ಜೈನ್ ಹಾಗೂ ದೀಪಾಶ್ರೀ ಕತ್ತೋಡಿ ಅಪಾಯದಿಂದ ಪಾರಾದವರು. ಇವರು ಜೈನರ ತೀರ್ಥಕ್ಷೇತ್ರಗಳಿಗೆ ಯಾತ್ರೆ ಹೊರಟಿದ್ದರು. ಇವರು ವೇಣೂರಿನಿಂದ ಕಳಸಕ್ಕೆ ತೆರಳಿ ಅಲ್ಲಿಂದ ೧೧೦ ಮಂದಿ ಯಾತ್ರಿಗಳು ಬಸ್ಸಿನ ಮೂಲಕ ಬೆಂಗಳೂರಿಗೆ ತೆರಳಿ ಅಲ್ಲಿಂದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಮೂಲಕ ಪ್ರಯಾಣ ಬೆಳೆಸಿದ್ದರು.
ಗಡಕ್ ಎಂಬ ಶಬ್ದ ಬಂತು, ರೈಲು ನಿಂತಿತು!
ವಿಚಾರ ತಿಳಿದಾಗ ಗದ್ಗತೀತರಾದೆವು
ಅಪಘಾತವಾದ ರೈಲಿನಲ್ಲಿದ್ದ ಯಾತ್ರಿ ಅಶಾಲತಾ ವೇಣೂರು ಅವರು ರೂರಲ್‌ಎಕ್ಸ್‌ಪ್ರೆಸ್ ನ್ಯೂಸ್ ಜತೆ ಮಾತನಾಡಿ, ಜೂ. ೧ರಂದು ಬೆಳಿಗ್ಗೆ ಬೆಂಗಳೂರಿನಿಂದ ಕಲ್ಕತ್ತಕ್ಕೆ ಹೊರಟಿದ್ದೆವು.
ಉಜಿರೆ, ಮೂಡಬಿದಿರೆ ಮಂಗಳೂರು ಸೇರಿದಂತೆ ದ.ಕ. ಜಿಲ್ಲೆಯ ೨೧ ಮಂದಿ ಇದ್ದೇವೆ. ನಾವು ಸುಮಾರು ನಿನ್ನೆ ಸಂಜೆ ೭.೩೦ರ ಗಂಟೆಗೆ ಪ್ರಯಾಣಿಸುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ಏಕಾಏಕಿ ಶಬ್ದದೊಂದಿಗೆ ಇಡೀ ರೈಲು ಅಲುಗಾಡಿದ ಅನುಭವ ಆಯಿತು.
ತಕ್ಷಣ ರೈಲನ್ನು ನಿಲ್ಲಿಸಿದರು. ಏನಾಯಿತು ಎಂದು ತಿಳಿದುಕೊಳ್ಳುವಷ್ಟರಲ್ಲಿ ರೈಲಿನ ಕೊನೆಯ ೪ ಬೋಗಿಗಳಿಗೆ ಬೇರೊಂದು ರೈಲು ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಬಂತು. ವಿಚಾರ ತಿಳಿದು ಗದ್ಗತೀತರಾದೆವು. ಕೆಲವರು ಘಟನಾ ಸ್ಥಳಕ್ಕೆ ಹೋದರು. ನಾವು ಘಟನಾ ಸ್ಥಳಕ್ಕೆ ತೆರಳಲಿಲ್ಲ. ಮಧ್ಯರಾತ್ರಿ ೧.೩೦ರ ಗಂಟೆಗೆ ರೈಲು ಮತ್ತೆ ಹೊರಟಿತು. ೫ ಸುಮಾರು ಐದು ಗಂಟೆಗಳ ಕಾಲ ರಾತ್ರಿಯಿಡೀ ಕಾಡುಪ್ರದೇಶದಲ್ಲಿ ಕಳೆಯುವಂತಾಯಿತು. ಮೇ ೩೧ರಂದು ವೇಣೂರಿನಿಂದ ಹೊರಟಿದ್ದೇವು ಎಂದಿದ್ದಾರೆ.