


ಆರಂಬೋಡಿ, ಮೇ 2: ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆತರೂ ಮೂಲಭೂತ ಸೌಲಭ್ಯಗಳು ಇಲ್ಲ ಅನ್ನುವ ಅಪವಾದಗಳು ಇಂದಿಗೂ ಇವೆ. ಆದರೆ ಒಂದು ಸರಕಾರಿ ಶಾಲೆಗೆ ಸಂಘಸಂಸ್ಥೆಗಳು ಸಹಕಾರ ನೀಡಿದರೆ ಯಾವ ರೀತಿ ಬೆಳವಣಿಗೆ ಕಾಣಲು ಸಾಧ್ಯವಿದೆ ಅನ್ನುವುದು ಹೊಕ್ಕಾಡಿಗೋಳಿಯಲ್ಲಿರುವ ಸ.ಹಿ.ಪ್ರಾ. ಶಾಲೆ ಉದಾಹರಣೆಯಾಗಿದೆ.

ಹೌದು, ಆರಂಬೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಹೊಕ್ಕಾಡಿಗೋಳಿ ಶಾಲೆಗೆ ಸಿದ್ದಕಟ್ಟೆ ರೋಟರಿ ಕ್ಲಬ್ ಹಾಗೂ ಸೆಲ್ಕೋ ಸೋಲಾರ್ ಅವರ ಸಹಕಾರದಲ್ಲಿ ಸುಮಾರು ರೂ. 1.75 ಲಕ್ಷ ವೆಚ್ಚದಲ್ಲಿ ಸೋಲಾರ್ ಆಧರಿತ ಡಿಜಿಟಲ್ ಸ್ಮಾರ್ಟ್ ಕ್ಲಾಸ್ ನಿರ್ಮಾಣ ಮಾಡಿದೆ. ಇದರ ಕಾಮಗಾರಿ ಮತ್ತು ಡಿಜಿಟಲ್ ಉಪಕರಣಗಳ ಅಳವಡಿಸುವ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಶೀಘ್ರ ಉದ್ಘಾಟನೆ ಆಗಲಿದೆ ಎಂದು ಸಿದ್ದಕಟ್ಟೆ ರೋಟರಿ ಅಧ್ಯಕ್ಷರಾದ ರೊ| ಗಣೇಶ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಲೊರೆಟ್ಟೊ ಹಿಲ್ಸ್ ರೋಟರಿ ಕೊಡುಗೆ
ಬಂಟ್ವಾಳದ ಲೊರೆಟ್ಟೊ ರೋಟರಿ ಕ್ಲಬ್ ವತಿಯಿಂದ ಇದೇ ಹೊಕ್ಕಾಡಿಗೋಳಿ ಶಾಲೆಗೆ ರೂ. 25 ಸಾವಿರ ಮೌಲ್ಯದಲ್ಲಿ ಪೀಠೋಪಕರಣವನ್ನೂ ಒದಗಿಸಿದೆ. ಒಂದು ಗ್ರಾಮೀಣ ಭಾಗದ ಸರಕಾರಿ ಶಾಲೆಗೆ ಇಷ್ಟೊಂದು ಪ್ರೋತ್ಸಾಹ ನೀಡುತ್ತಿರುವ ರೋಟರ್ ಕ್ಲಬ್ ಸಂಸ್ಥೆಗಳ ಕಾರ್ಯವೈಖರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.