March 19, 2026
WhatsApp Image 2025-05-31 at 6.22.23 PM

ಉಡುಪಿ; ಪತಿ ಹಾಗೂ ಪತ್ನಿ ಸಾವಿನಲ್ಲೂ ಒಂದಾದ ಘಟನೆ ಕುಂದಾಪುರದ  ಸಾಸ್ತಾನ ಬಳಿಯ ಗುಂಡ್ಮಿಯಲ್ಲಿ ನಡೆದಿದೆ.

ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕರಾದ ಜೆ. ರತ್ನಾಕರಾಯ (84) ಮತ್ತು ಅವರ ಪತ್ನಿ ಸರೋಜಮ್ಮ (72) ಸಾವಿನಲ್ಲೂ ಒಂದಾಗಿದ್ದಾರೆ.

ಸರೋಜಮ್ಮ ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದರು. ಈ ವೇಳೆ ಪತ್ನಿಯ ಪಕ್ಕದಲ್ಲೇ ಇದ್ದ  ರತ್ನಾಕರಾಯ ಅವರ ಆರೋಗ್ಯಗಲ್ಲಿ ಏರುಪೇರಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.  ತಕ್ಷಣ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ, ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಪತ್ನಿ ಸಾವನ್ನಪ್ಪಿದ 4 ಗಂಟೆಗಳ ಬಳಿ ರತ್ನಾಕರಾಯ ನಿಧನರಾಗಿದ್ದಾರೆ.ಮೃತ ದಂಪತಿ ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.