ಉಡುಪಿ : ವ್ಯಕ್ತಿಯೊಬ್ಬರು ಮನೆಯ ಮೊದಲ ಅಂತಸ್ತಿನ ಮೇಲ್ಛಾವಣೆಯ ಕಬ್ಬಿಣದ ಅಡ್ಡಪಟ್ಟಿಗೆ ನೇಣುಬೀಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಬಡಗುಬೆಟ್ಟು ಗ್ರಾಮದ ನವಗ್ರಹ ಕಾಲೋನಿಯಲ್ಲಿ ನಡೆದಿದೆ.
ವ್ಯಕ್ತಿ ನೇಣು ಕುಣಿಕೆಯಲ್ಲಿ ನರಳಾಡುತ್ತಿದ್ದಾಗ, ದೇಹದ ಭಾರವು ನಿಯಂತ್ರಣ ಸಿಗದೆ, ಹಗ್ಗವು ತುಂಡಾದ ಪರಿಣಾಮ, ವ್ಯಕ್ತಿ 20 ಅಡಿಗಿಂತಲೂ ಅಧಿಕ ಎತ್ತರದಿಂದ ಮನೆಯ ಹೊರಾಂಗಳದಲ್ಲಿ ಬಿದ್ದಿದ್ದಾರೆ. ತಲೆ ಭಾಗಕ್ಕಾದ ಗಂಭೀರ ಸ್ವರೂಪದ ಗಾಯದಿಂದ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ಮೆಲ್ರಾಯ್ (55ವ) ತಂದೆ ಎಫ್.ಜೆ.ಎ. ಫೆರ್ನಾಂಡಿಸ್ ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿದ್ದು ಮಣಿಪಾಲ ಪೋಲಿಸ್ ಠಾಣೆಯ ಪಿ.ಎಸ್.ಐ ಅನಿಲ್ ಕುಮಾರ್, ಎ.ಎಸ್.ಐ ನಾಗೇಶ್ ನಾಯ್ಕ್, ಸಿಬ್ಬಂದಿ ವಿದ್ಯಾ ಕಾನೂನು ಪ್ರಕ್ರಿಯೆ ನಡೆಸಿದರು. ವಿಧಿ ವಿಜ್ಞಾನ ತಜ್ಞರಾದ ಪ್ರಸನ್ನ, ಲಾವಣ್ಯ, ಹರೀಶ್ ಪರಿಶೀಲಿಸಿದರು. ಶವವನ್ನು ಮಣಿಪಾಲ ಆಸ್ಪತ್ರೆಯ ವೈದಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಇಲಾಖೆಗೆ ನೆರವಾದರು.