ಉಡುಪಿ: ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾದ ಯೋಧ ಕುಂದಾಪುರದ ಅನೂಪ್ ಪೂಜಾರಿಯವರ ಮನೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ವ್ಯಕ್ತಪಡಿಸುವುದರೊಂದಿಗೆ, ಭಾರತೀಯ ಸೇನೆಗೆ ಅವರು ನೀಡಿದ ತ್ಯಾಗ ಹಾಗೂ ದೇಶಸೇವೆಗೆ ಗೌರವ ಸಲ್ಲಿಸಿದರು.
ವೈಯಕ್ತಿಕ ನೆಲೆಯಲ್ಲಿ ಅನೂಪ್ ಕುಟುಂಬಕ್ಕೆ 1 ಲಕ್ಷ ಮೊತ್ತದ ಆರ್ಥಿಕ ನೆರವು ನೀಡಿದರು.