March 26, 2026
WhatsApp Image 2025-09-29 at 5.39.46 PM

ಕಾರ್ಕಳ : ದನಗಳನ್ನು ಕಳ್ಳತನ ಮಾಡಿದ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲಿನಲ್ಲಿ ಸೆ.28 ರ ರವಿವಾರ ತಡರಾತ್ರಿ ನಡೆದಿದೆ.

ಶಿರ್ಲಾಲಿನ ಜಯಶ್ರೀ ಎಂಬ ಮಹಿಳೆಯ ಮನೆಯ ಹಟ್ಟಿಗೆ ನುಗ್ಗಿದ ದುಷ್ಟರು ಮೂರು ದನಗಳನ್ನು ಕದ್ದೊಯ್ದಿದ್ದಾರೆ.ಈ ಘಟನೆ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ರಾತ್ರಿ ಮಹಿಳೆಯು ಮನೆಯಲ್ಲಿ ಒಂಟಿಯಾಗಿದ್ದಾಗ ವಾಹನವೊಂದರಲ್ಲಿ ದುಷ್ಟರು ಬಂದಿದ್ದು, ಈ ವೇಳೆ ಶಬ್ದಕ್ಕೆ ಎಚ್ಚೆತ್ತ ಮಹಿಳೆ ಹೊರಗೆ ಬಂದಾಗ ಮಾರಕಾಸ್ತ್ರಗಳನ್ನು ತೋರಿಸಿ ಆಕೆಯನ್ನು ಬೆದರಿಸಿ ದನಗಳನ್ನು ಹೊತ್ತೋಯ್ದಿದ್ದಾರೆ. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.