ಉಡುಪಿ: ಮಲ್ಪೆ ಬಂದರಿನಿಂದ ಸುಮಾರು 13 ನಾಟಿಕಲ್ ಮೈಲು ದೂರದ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಬೋಟಿನಿಂದ ನೀರಿಗೆ ಬಿದ್ದು ಮೀನುಗಾರರೊಬ್ಬರು ನಾಪತ್ತೆಯಾಗಿರುವ ಘಟನೆ ಡಿ.25ರಂದು ನಸುಕಿನ ವೇಳೆ 2ಗಂಟೆಗೆ ಸುಮಾರಿಗೆ ನಡೆದಿದೆ.
ನಾಪತ್ತೆಯಾದವರನ್ನು ಅಂಕೋಲ ತಾಲೂಕಿನ ಕೃಷ್ಣ ತಿಮ್ಮಪ್ಪ(48) ಎಂದು ಗುರುತಿಸಲಾಗಿದೆ.
ಶ್ರೀದತ್ತಾಂಜನೇಯ ಪರ್ಷಿಯನ್ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿದ್ದ ಇವರು ಆಯ ತಪ್ಪಿಬೋಟ್‌ನಿಂದ ನೀರಿಗೆ ಬಿದ್ದು ನಾಪತ್ತೆ ಯಾಗಿದ್ದಾರೆ. ಸಮುದ್ರದಲ್ಲಿ ಹುಡುಕಾಡಿದರೂ ಈವರೆಗೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.