ಉಡುಪಿ: ಡಿಜಿಟಲ್ ಅರೆಸ್ಟ್ ಆಗಿರುವುದಾಗಿ ಪೊಲೀಸರ ಹೆಸರಿನಲ್ಲಿ ಮಹಿಳೆಯೊಬ್ಬರನ್ನು ಹೆದರಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾ(53) ಎಂಬವರಿಗೆ ಅ.4ರಂದು ಪೊಲೀಸ್ ಅಧಿಕಾರಿ ಎಂದು ಹೇಳಿ ಕರೆ ಮಾಡಿ, ನಿಮ್ಮ ಆಧಾರ್ ಕಾರ್ಡ್ ಮೂಲಕ ಮುಂಬೈ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದು ಆ ಖಾತೆಗೆ ಹ್ಯುಮನ್ ಟ್ರಾಫಿಂಗ್ ಹಾಗೂ ಮನಿ ಲಾಂಡರಿಂಗ್ ಮೂಲಕ ಹಣವನ್ನು ವರ್ಗಾವಣೆ ಮಾಡಲಾಗಿದೆ. ಆದ್ದರಿಂದ ನಿಮ್ಮ ಎಲ್ಲಾ ಅಕೌಂಟ್ ಪರಿಶೀಲನೆ ಮಾಡಬೇಕಾಗಿರುವುದಾಗಿ ತಿಳಿಸಿದ್ದರು.
ಅ.5ರಂದು ಮತ್ತೆ ಕರೆ ಮಾಡಿ ನಿಮ್ಮನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದ್ದು, ನೀವು ಎಲ್ಲಿಗೂ ಹೋಗುವಂತಿಲ್ಲ, ಎಲ್ಲಿಗೆ ಹೋಗುವುದಿದ್ದರೂ ನಮಗೆ ತಿಳಿಸಬೇಕು ಎಂಬುದಾಗಿ ಬೆದರಿಸಿದ್ದನು. ನಿಮ್ಮ ಎಲ್ಲಾ ಅಕೌಂಟ್ ಪ್ರೀಜ್ ಆಗಿದ್ದು, ಆದ್ದರಿಂದ ನಿಮ್ಮ ಅಕೌಂಟ್‌ನಲ್ಲಿದ್ದ ಹಣವನ್ನು ನಾವು ಹೇಳಿದ ಖಾತೆಗೆ ಕಳುಹಿಸಲು ತಿಳಿಸಿದ್ದನು. ಅದರಂತೆ ವಿದ್ಯಾ ಅ.16ರಿಂದ ನ.7ರ ತನಕ ಹಂತ ಹಂತವಾಗಿ ಒಟ್ಟು 19,71,679ರೂ. ಹಣವನ್ನು ವರ್ಗಾಯಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.