
ಬಂಟ್ವಾಳ: ಅಪರಿಚಿತ ಸ್ಕೂಟರ್ ಸವಾರನು ರಸ್ತೆಯಲ್ಲಿ ರಾತ್ರಿ 7.30-8.00 ಗಂಟೆಯ ಅವಧಿಯಲ್ಲಿ ಕೆಲಸಬಿಟ್ಟು ಮನೆಗೆ ತೆರಳುತ್ತಿದ್ದ ಮಹಿಳೆಯರಿಗೆ ಅಪಮಾನ ಮಾಡಿದ ಕೃತ್ಯ ಎಸಗಿದ್ದು, ಆರೋಪಿತನ ಪತ್ತೆ ಬಗ್ಗೆ ತನಿಖೆ ನಡೆಸಲಾಗಿ ಬಂಟ್ವಾಳ ತಾಲೂಕು ಪಾಣೆಮಂಗಳೂರು ನಿವಾಸಿ ತನ್ನ ಪೋಷಕರ ಜೊತೆ ವಾಸವಾಗಿರುವ 13 ವರ್ಷದ ಬಾಲಕನು ಈ ಕೃತ್ಯವನ್ನು ಎಸಗಿರುವುದು ಲಭ್ಯ ಸಾಕ್ಷ್ಯಾಧಾರಗಳಿಂದ ಸಾಬೀತಾಗಿರುತ್ತದೆ.
ಅದರಂತೆ ದಿನಾಂಕ: 26.08.2025ರಂದು ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಆತನ ಸ್ವ ಗೃಹದಲ್ಲಿ ತಾಯಿಯ ಸಮಕ್ಷಮ ವಿಚಾರಿಸಿ ಹೇಳಿಕೆ ಪಡೆದು, ಬಾಲನ್ಯಾಯ ಮಂಡಳಿ ಮಂಗಳೂರುರವರ ಸಮಕ್ಷಮಕ್ಕೆ ದಿನಾಂಕ: 26.08.2025ರಂದು ಹಾಜರುಪಡಿಸಲಾಗಿದ್ದು, ಮಾನ್ಯ ಬಾಲ ನ್ಯಾಯಾಲಯವು ಬಾಲಕನನ್ನು ದಿನಾಂಕ 02.09.2025 ವರೆಗೆ ಪರಿವೀಕ್ಷಣಾ ಮಂದಿರಕ್ಕೆ ಬಿಡುವಂತೆ ಆದೇಶ ಮಾಡಿರುತ್ತಾರೆ.
