
ಉಡುಪಿ: ಕರಾವಳಿಯಲ್ಲಿ ಮಳೆಯ ಜೊತೆ ಬೀಸುವ ಭಾರೀ ಗಾಳಿಯಿಂದಾಗಿ ಹಲವು ಕಡೆ ನಾನಾ ರೀತಿಯ ಅವಾಂತರಗಳು ಸೃಷ್ಟಿಯಾಗಿದೆ. ಇದೀಗ ಕಾಲೇಜೊಂದರ ಮೇಲ್ಛಾವಣಿ ಗಾಳಿಗೆ ಸಂಪೂರ್ಣ ಹಾರಿ ಹೋಗಿ ಲಕ್ಷಾಂತರ ರೂ. ನಷ್ಟವಾದ ಘಟನೆ ಉಡುಪಿಯಲ್ಲಿ ನಡೆದಿದೆ.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಕಟ್ಟಡದ ಮೂರನೇ ಮಹಡಿಯಲ್ಲಿ ಹಾಕಲಾದ ಮೇಲ್ಛಾವಣಿ ಸಂಪೂರ್ಣ ಹಾನಿಯಾಗಿದೆ. ಫ್ಯಾನ್, ನೀರಿನ ಟ್ಯಾಂಕ್, ವಿದ್ಯುತ್ ಸಲಕರಣೆಗಳು ಕೂಡಾ ಹಾನಿಯಾಗಿದೆ.
ಸುಮಾರು ಹತ್ತು ಲಕ್ಷಕ್ಕೂ ಅಧಿಕ ನಷ್ಟವುಂಟಾಗಿದೆ. ಸ್ಥಳಕ್ಕೆ ಕಲ್ಯಾಣಪುರ ಗ್ರಾಮ ಲೆಕ್ಕಿಗ ವಿಜಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
