ಉಡುಪಿ: ವಿಡಿಯೋ ಚಿತ್ರೀಕರಣ ಘಟನೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಉಡುಪಿ: ಖಾಸಗಿ ಕಾಲೇಜಿನಲ್ಲಿ ಹಿಂದೂ ಯುವತಿಯ ವಿಡಿಯೋ ಚಿತ್ರೀಕರಣ ಘಟನೆ ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡ ಬೃಹತ್ ಪ್ರತಿಭಟನೆಗೆ ಕಡಿಯಾಳಿ ಬಿಜೆಪಿ ಕಚೇರಿಯಲ್ಲಿ ಚಾಲನೆ ನೀಡಲಾಯಿತು.

ಕಡಿಯಾಳಿ ಬಿಜೆಪಿ ಕಚೇರಿಯಿಂದ ಆರಂಭಗೊಂಡ ಪ್ರತಿಭಟನೆ ಕಲ್ಸಂಕ, ಸಿಟಿಬಸ್ ನಿಲ್ದಾಣ ಹಾಗೂ ಬನ್ನಂಜೆ ಮೂಲಕ ಸಾಗಿ ಎಸ್ಪಿ ಕಚೇರಿ ಮುಂದೆ ಮುಕ್ತಾಯಗೊಂಡಿತು‌.

ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ದಿಕ್ಕಾರ ಕೂಗಿದರು‌‌ . ವಿಡಿಯೋ ಮಾಡಿರುವ ಮೂವರು ಮುಸ್ಲಿಮ್ ವಿದ್ಯಾರ್ಥಿಗಳನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಸಂತ್ರಸ್ತ ಯುವತಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.

Check Also

ಮಂಗಳೂರು: ನಕಲಿ ಷೇರ್ ಮಾರ್ಕೆಟ್ ಟ್ರೆಡಿಂಗ್ ನಲ್ಲಿ 74 ಲಕ್ಷ ವಂಚನೆ

ಮಂಗಳೂರು: ನಕಲಿ ಷೇರ್ ಮಾರ್ಕೆಟ್ ಟ್ರೆಡಿಂಗ್ ನಂಬಿ ಮಂಗಳೂರಿನ ವ್ಯಕ್ತಿಯೊಬ್ಬ 74,18,952 ರೂ. ವಂಚನೆಗೊಳಗಾದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ …

Leave a Reply

Your email address will not be published. Required fields are marked *

You cannot copy content of this page.