

ಬೈಂದೂರು: ಕಾರ್ಕಳ ನಿಟ್ಟೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿಎಲ್ ಎಸ್ ಐ ಪದವಿ ವಿದ್ಯಾರ್ಥಿ ಅಭಿನಂದನ್ ರಜೆಯಲ್ಲಿ ಬೈಂದೂರಿನ ಮನೆಗೆ ಬಂದು ಕಾಲೇಜಿಗೆ ಹೋದವನು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಮಾ.22ರಂದು ಮಧ್ಯಾಹ್ನ ಅಭಿನಂದನ್ ಬೈಂದೂರಿನ ಮನೆಯಿಂದ ಕಾಲೇಜಿಗೆ ಹೋಗುತ್ತೇನೆಂದು ಹೋಗಿದ್ದು, ಎರಡು ಬಾರಿ ಮನೆಗೆ ಫೋನ್ ಮಾಡಿದ್ದು, ನಂತರ ಮನೆಗೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಂತರ ತಂದೆ ಮಹಾಬಲೇಶ್ವರ ಅವರು ನಿಟ್ಟೆ ಕಾಲೇಜಿಗೆ ಹೋಗಿ ಮಗನ ಕುರಿತು ವಿಚಾರಿಸಿದಾಗ, ಕಾಲೇಜಿಗೆ ರಜೆ ಹಾಕಿ ತೆರಳಿರುವುದಾಗಿ ತಿಳಿಸಿದ್ದರು.
ಅಭಿನಂದನ್ ರವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಮಗ ಕಾಣೆಯಾಗಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.