March 21, 2026
WhatsApp Image 2024-06-27 at 5.50.22 PM
ಕಾರ್ಕಳ :  ಇಂದು ಬೆಳಗ್ಗೆ 11.15 ರ ಸುಮಾರಿಗೆ ಬೀಸಿದ ಭಾರೀ ಗಾಳಿಮಳೆಯ ಪರಿಣಾಮ ಕಾರ್ಕಳ ತಾಲೂಕಿನ ನೀರೆ ಪಂಚಾಯತ್ ವ್ಯಾಪ್ತಿಯ ಮೀನು ಮಾರುಕಟ್ಟೆಗೆ ಮರ ಉರುಳಿ ಬಿದ್ದು ಮೀನು ಮಾರಾಟ ಮಾಡುತ್ತಿದ್ದ ಇಬ್ಬರು ಗಾಯಗೊಂಡು, ಮಾರುಕಟ್ಟೆ ಶೆಡ್ ಹಾಗೂ ಮೀನು‌ ಸಾಗಾಟ ವಾಹನ ಜಖಂಗೊಂಡ ಘಟನೆ ನಡೆದಿದೆ.
 ಮೀನು ವ್ಯಾಪಾರಿ ಭಾಸ್ಕರ ಹಾಗೂ ಎರ್ಲಪಾಡಿ ಗ್ರಾಮದ ಕಾಂತರಗೋಳಿಯ ಸುಮಿತ್ರಾ ಎಂಬವರು ಗಾಯಗೊಂಡಿದ್ದಾರೆ‌. ಘಟನಾ ಸ್ಥಳಕ್ಕೆ ನೀರೆ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಪ್ರಭು, ಪಿಡಿಒ ಅಂಕಿತಾ ನಾಯಕ್ ಧಾವಿಸಿ ಗಾಯಾಳುಗಳನ್ನು  ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು.

About The Author

Leave a Reply

Your email address will not be published. Required fields are marked *

You cannot copy content of this page.