ಉಡುಪಿ : ನಗರದ ಬನ್ನಂಜೆಯ ಶಿರಬೀಡು ವಾರ್ಡ್ ಗಣಪತಿ ದೇವಸ್ಥಾನ ಬಳಿಯಲ್ಲಿ ಹಾದು ಹೋಗುವ ರಾಜ ಕಾಲುವೆಯಲ್ಲಿ ವ್ಯಕ್ತಿ ಓರ್ವರು ಆಕಸ್ಮಿಕವಾಗಿ ಬಿದ್ದು ದುರ್ಮರಣಗೊಂಡ ಘಟನೆ ಇಂದು ಸಂಜೆ ನಡೆದಿದೆ.
ಬಿದ್ದ ವ್ಯಕ್ತಿ ಸಹಾಯಕ್ಕಾಗಿ ಸ್ಥಳೀಯರನ್ನು ಕೂಗಿದರು ಯಾರು ಬರದೆ ಗಾಯಗೊಂಡು ಮೃತ ಪಟ್ಟಿರಬಹುದೆಂದು ಅಂದಾಜಿಸಲಾಗಿದೆ.
ಸ್ಥಳೀಯವಾಗಿ ಹಲವಾರು ಜನ ಅಲ್ಲಿ ಓಡಾಡಿಕೊಂಡಿದ್ದರು ಯಾರು ನೆರವಿಗೆ ಬಾರದಿದ್ದದು ಬಹಳ ಆಶ್ಚರ್ಯವಾಗಿದೆ ಹತ್ತಿರದಲ್ಲಿ ಅಪಾರ್ಟ್ಮೆಂಟ್ ಹಲವಾರು ಮನೆಗಳು ಅಂಗಡಿ ಈತನ ಬೊಬ್ಬೆ ಕೇಳಿಸಲಿಲ್ಲ ಬಹುಶ ಅಂತ ಕಾಣ್ತದೆ ಈ ಹಿಂದೆಯೂ ಹಲವು ಜನ ಇಲ್ಲಿ ಬಿದ್ದ ಘಟನೆ ನಡೆದಿದೆ ಕೆಲವುವರ್ಷಗಳ ಹಿಂದೆ ಇದೆ ಕಾಲುವೆಗೆ ಬಿದ್ದು ವ್ಯಕ್ತಿಯವರು ಮೃತಪಟ್ಟಿದ್ದರು.
ಇಷ್ಟೆಲ್ಲ ಘಟನೆ ನಡೆದಿದ್ದರೂ ನಗರಸಭಾ ಸದಸ್ಯರು ರಾಜ ಕಾಲವೆಗೆ ತಡೆಗೋಡೆ ನಿರ್ಮಿಸಲಿಲ್ಲ ಸ್ಥಳೀಯರು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಅನಾಹುತ ನಡೆಯುವ ಮೊದಲು ತಕ್ಷಣ ನಗರಸಭಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಾಜ ಕಾಲುವೆಗೆ ತಡೆಗೋಡೆ ನಿರ್ಮಿಸಿ ಕೊಡಬೇಕೆಂದು ಸ್ಥಳೀಯರು ಅಗ್ರಹಿಸಿದ್ದಾರೆ.