March 21, 2026
WhatsApp Image 2024-05-30 at 6.03.22 PM

ಉಡುಪಿ: ಕೆಲ ದಿನಗಳ ಹಿಂದೆ ಉಡುಪಿಯ ಪುತ್ತೂರಿನ ಬಿರಿಯಾನಿ ಪಾಯಿಂಟ್ ಬಳಿ ನಡೆದಿದ್ದ ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನ ಮನೆಯಿಂದಲೇ ಪೊಲೀಸರು ತಲವಾರು ವಶಪಡಿಸಿಕೊಂಡಿದ್ದಾರೆ. ಸೆಲೂನಿನಲ್ಲಿ ಕೆಲಸ ಮಾಡಿಕೊಂಡಿದ್ದ ಪುತ್ತೂರು ಗ್ರಾಮದ ಚರಣ್ ರಾಜ್(18) ಎಂಬಾತನ ಮನೆಯಲ್ಲಿ ತಲವಾರು ಇರುವ ಬಗ್ಗೆ ಉಡುಪಿ ನಗರ ಠಾಣಾ ಎಸ್ಸೈ ಪುನೀತ್ ಕುಮಾರ್ ರಿಗೆ ಮಾಹಿತಿ ಬಂದಿದ್ದು, ಅದರಂತೆ ನ್ಯಾಯಾಲಯದಿಂದ ಸರ್ಚ್ ವಾರೆಂಟನ್ನು ಪಡೆದುಕೊಂಡು ಆತನ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಆತನ ಮನೆಯಲ್ಲಿ ತಲವಾರು ದೊರೆತಿದ್ದು, ಅದರಂತೆ ಆತನ ವಿರುದ್ಧ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಾರದ ಹಿಂದೆ ಪ್ರವೀಣ್, ಅಭಿಷೇಕ್, ದೇಶರಾಜ್ ಮತ್ತು ಇತರರು ತಲವಾರಗಳನ್ನು ಹಿಡಿದುಕೊಂಡು ದಾಳಿ ಮಾಡಿ ದ್ವಿಚಕ್ರ ವಾಹನಗಳಿಗೆ ಹಾನಿ ಮಾಡಿದ್ದರೆಂದು ಚರಣ್‌ರಾಜ್‌ ಉಡುಪಿ ನಗರ ಠಾಣೆಗೆ ದೂರು ನೀಡಿದ್ದ.

About The Author

Leave a Reply

Your email address will not be published. Required fields are marked *

You cannot copy content of this page.