
ಮಲ್ಪೆ: ಉಡುಪಿ ಗ್ರೂಫ್ ಆಫ್ ಇನ್ಸ್ಟಿಟ್ಯೂಷನ್ ಮಣಿಪಾಲ ಇವರ ಆಶ್ರಯದಲ್ಲಿ ಇದೇ ಬರುವ ಮೇ ಇಪ್ಪತ್ತೈದರಂದು ಸಂಜೆ ನಾಲ್ಕು ಗಂಟೆಗೆ ನಿನಾದ ಹೆಜ್ಜೆ ಗೆಜ್ಜೆಗಳ ಮಿಲನ ಸಾಂಸ್ಕೃತಿಕ ಸಂಜೆ ಮತ್ತು ಫುಡ್ ಸ್ಟ್ರೀಟ್ ಉತ್ಸವ ನಡೆಯಲಿದೆ.
ಮಲ್ಪೆಯ ಫಿಶ್ ಟ್ರೇಡ್ ಸೆಂಟರ್ ಹತ್ತಿರದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಫನ್ ಗೇಮ್ಸ್, ಫುಡ್ ಸ್ಟಾಲ್ ಗಳು, ಕಲ್ಚರಲ್ ಇವೆಂಟ್ ಗಳು, ತುಳು ನಾಟಕ, ಫ್ಯಾಷನ್ ಶೋ, ಡ್ಯಾನ್ಸ್, ಮ್ಯೂಸಿಕ್ ಮುಂತಾದ ಕಾರ್ಯಕ್ರಮಗಳು ಇರಲಿದೆ. ಹೆಚ್ಚಿನ ಮಾಹಿತಿಗೆ 9901771742 ಅಥವಾ 9916281211 ಈ ನಂಬರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
