
ಉಡುಪಿ ತಾಲೂಕು ಪರವಾನಿಗೆ ಹೊಂದಿರುವ ಎಲ್ಲಾ ಆಟೋ ರಿಕ್ಷಾಗಳಿಗೆ ವಲಯ-01 ಮತ್ತು ವಲಯ-02 ಸ್ಟಿಕ್ಕರ್‌ಗಳನ್ನು ಫೆಬ್ರವರಿ 28 ರೊಳಗೆ ವಾಹನದ ಮೂಲ ಪರವಾನಿಗೆಯನ್ನು ಹಾಜರುಪಡಿಸಿ ಪ್ರಾದೇಶಿಕ ಸಾರಿಗೆ ಅಧಿಕಾಗಿಗಳ ಕಚೇರಿಯಿಂದ ಸ್ಟಿಕ್ಕರ್‌ಗಳನ್ನು ಪಡೆದು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಉಡುಪಿ ತಾಲೂಕು ಪರವಾನಿಗೆ ಹೊಂದಿರುವ ಎಲ್ಲಾ ಆಟೋ ರಿಕ್ಷಾ ಚಾಲಕ/ ಮಾಲಕರಿಗೆ ಸೂಚಿಸಲಾಗಿದೆ.
ತಪ್ಪಿದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕಛೇರಿ ಪ್ರಕಟಣೆ ತಿಳಿಸಿದೆ.
