ಜುಬಿರೀಚ್ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಣಿಪಾಲ ಶಾಖೆ ಆರಂಭ

ಕಾಲೂರ್ ಕೇರಳ ಮೂಲದ ಜುಬಿರೀಚ್ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ ಕಂಪನಿಯೂ ಕಳೆದ 25 ವರುಷಗಳಿಂದ ಬೇರೆ ಬೇರೆ ದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಯನಾಸಕ್ತರಿಗೆ ವೀಸಾ ಸಂಸ್ಕರಣೆ, ದಸ್ತಾವೇಜುಗಳ ಪ್ರಕ್ರಿಯೆ ಮತ್ತು ಲೆಕ್ಕಪತ್ರಗಳ ಅಣಿಗೊಳಿಸುವಿಕೆ ಮತ್ತು ಪೂರೈಕೆ ಮುಂತಾದವುಗಳನ್ನು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಒದಗಿಸುತ್ತಾ ಬಂದಿದೆ.

ಸಂಸ್ಥೆಯು ಇದೀಗ ರಾಜ್ಯದ ಕರಾವಳಿ ಭಾಗದಲ್ಲಿನ ಮೊದಲ ಶಾಖೆಯನ್ನು ಕರಾವಳಿಯ ಸುಂದರ ಶೈಕ್ಷಣಿಕ ನಗರಿಯಾದ ಮಣಿಪಾಲದಲ್ಲಿ ಆರಂಭಿಸುತ್ತಿದೆ. ಇದರ ಉದ್ಘಾಟನೆಯು ಜನವರಿ 22ರಂದು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರ ಅಧ್ಯಕ್ಷತೆಯಲ್ಲಿ ಮತ್ತು ಡಾ। ಮೋಹನ ಆಳ್ವ, ಮುಖ್ಯಸ್ಥರು, ಆಳ್ವಾಸ್ ಫೌಂಡೇಶನ್ ಮೂಡುಬಿದರೆ, ಡಾ। ಆರ್.ರಾಮು.ಎಲ್, ಪ್ರಾಂಶುಪಾಲರು, ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತರ ಅಧ್ಯಯನ ಕೇಂದ್ರ ಉಡುಪಿ, ಡಾ। ಸಂದೀಪ ಎಸ್., ನಿರ್ದೇಶಕರು ಡಿ ಓ ಸಿ ಮಾಹೆ ಮತ್ತು ಅಡ್ವೋಕೇಟ್ ಜಸ್ಟಿ ಮಾಥ್ಯುಸ್.ಟಿ, ಮುಖ್ಯಸ್ಥರು ಜುಬಿರೀಚ್ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ ಮುಂತಾದ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.

ಜುಬಿರೀಚ್ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ ವಿದೇಶಗಳಲ್ಲಿ ವ್ಯಾಸಂಗ ಮಾಡ ಬಯಸುವ ವಿದ್ಯಾರ್ಥಿಗಳಿಗೆ ಒತ್ತಡ ರಹಿತ ಮುಕ್ತ ಪಾರದರ್ಶಕ ರೀತಿಯಲ್ಲಿ ಪ್ರವೇಶಾತಿ ಪ್ರಕ್ರಿಯೆಗಳನ್ನು ಪೂರೈಸುತ್ತಿದ್ದು ಈ ದಿಸೆಯಲ್ಲಿ ವಿಶ್ವಾಸನೀಯ ಸಂಸ್ಥೆಯೊಂದು ಏಜೆನ್ಸಿ ಮನ್ನಣೆಗಳಿಸಿದೆ.

ನುರಿತ ಪರಿಣತ ಸಲಹೆಗಾರರಿಂದ ಕೂಡಿದ ಹಲವು ತಂಡಗಳು ಸಂಸ್ಥೆಯ ವಿವಿಧ ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅಧ್ಯಯನಾಸಕ್ತ ಅಭ್ಯರ್ಥಿಗಳಿಗೆ ವಿದೇಶಗಳ ಬೇರೆ ಬೇರೆ ಕಾಲೇಜು ಯೂನಿವರ್ಸಿಟಿಗಳ ಬಗ್ಗೆ ಮಾಹಿತಿಗಳನ್ನು ನೀಡುವುದು ಮಾತ್ರವಲ್ಲದೆ ಅಲ್ಲಿಯ ಅಧಿಕಾರಿಗಳೊಂದಿಗೆ ವರ್ಚುವಲ್ ಮುಖೇನ ಸಂಪರ್ಕ ಕಲ್ಪಿಸಿ ಕೊಡುತ್ತಾರೆ.

ಜುಬಿರೀಚ್ ಸಂಸ್ಥೆಯು ಇಂದಿನವರೆಗೆ 99% ಯಶಸ್ವಿ ವಿಸಾಗಳಿಕೆಗಾಗಿ ಪ್ರಸಿದ್ಧವಾಗಿದೆ. ಸಂಸ್ಥೆಯ ಮೂಲಕ ವೀಸಾ ಹೊಂದಿ ನಾನ ವಿದೇಶಿಯ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ನಿರತ ವಿದ್ಯಾರ್ಥಿಗಳು ಇದನ್ನು ಒಮ್ಮತದಿಂದ ಸ್ವೀಕರಿಸುತ್ತಾರೆ. ಯಾವುದೇ ಶುಲ್ಕವಿಲ್ಲದ ವೀಸಾ ಪ್ರಕ್ರಿಯೆಯು ಸಂಸ್ಥೆಯದ್ದು ಆಗಿರುತ್ತದೆ.

Check Also

ಜುಲೈ.23ರಂದು 2024-25ನೇ ಸಾಲಿನ ‘ಕೇಂದ್ರ ಬಜೆಟ್’ ಮಂಡನೆ

ನವದೆಹಲಿ: 2024-25ನೇ ಸಾಲಿನ ಕೇಂದ್ರ ಬಜೆಟ್ ( Union Budget ) ಜುಲೈ 23 ರಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಸಂಸತ್ತಿನ …

Leave a Reply

Your email address will not be published. Required fields are marked *

You cannot copy content of this page.